Kodagu: ನರಹಂತಕ ಹುಲಿಸೆರೆಗಾಗಿ ಕಾರ್ಯಾಚರಣೆ ತೀವ್ರ, 35 ಕಡೆ ಕ್ಯಾಮರಾ ಅಳವಡಿಕೆ

- ಕೊಡಗು ಜಿಲ್ಲೆಯಲ್ಲಿ  ಹುಲಿಸೆರೆಗಾಗಿ ಕಾರ್ಯಾಚರಣೆ ತೀವ್ರ

- ಇಲಾಖೆಯ ತಂಡಕ್ಕೆ ಸಾಕಾನೆಗಳು, ಶಾರ್ಪ್ ಶೂಟರ್​ಗಳು ಸಾಥ್ 

- 150 ಅರಣ್ಯ ಸಿಬ್ಬಂದಿ, 35 ಕಡೆಗಳಲ್ಲಿ ಹುಲಿ ಪತ್ತೆಗೆ ಕ್ಯಾಮರಾ ಅಳವಡಿಕೆ
 

First Published Apr 3, 2022, 10:09 AM IST | Last Updated Apr 3, 2022, 10:09 AM IST

ಕೊಡಗು (ಏ. 03): ಜಿಲ್ಲೆಯಲ್ಲಿ ನರಹಂತಕ ಹುಲಿಸೆರೆಗಾಗಿ (Operation Tiger)ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಅರಣ್ಯ ಇಲಾಖೆಯ ತಂಡಕ್ಕೆ ಸಾಕಾನೆಗಳು, ಶಾರ್ಪ್ ಶೂಟರ್​ಗಳು ಸಾಥ್ ನೀಡುತ್ತಿದ್ದಾರೆ. ಸುತ್ತಮುತ್ತಲಿನ ಜನತೆಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. 

ಕೊಡಗು (Kodgu)ಜಿಲ್ಲೆಯಲ್ಲಿ ವ್ಯಾಘ್ರನ ಸೆರೆಗಾಗಿ ಸರ್ಚ್ ಆಪರೇಷನ್ ತೀವ್ರಗೊಂಡಿದೆ. 35 ಕಡೆಗಳಲ್ಲಿ ಹುಲಿ ಪತ್ತೆಗೆ ಕ್ಯಾಮರಾ  ಅಳವಡಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ನರಬಲಿ ಪಡೆದ ವ್ಯಾಘ್ರನ ಸೆರೆಗಾಗಿ ಆಪರೇಷನ್ ಟೈಗರ್ ತೀವ್ರಗೊಳಿಸಲಾಗಿದೆ. ವೀರಾಜಪೇಟೆ ತಾಲೂಕಿನ ರುದ್ರಗುಪ್ಪೆ ಗ್ರಾಮದಲ್ಲಿ ಕಳೆದ ನಾಲ್ಕು  ದಿನಗಳ ಹಿಂದೆ ಕಾರ್ಮಿಕ ಗಣೇಶ್ ಎಂಬಾತನನ್ನು ಹೆಬ್ಬುಲಿ ಕೊಂದು ಹಾಕಿತ್ತು. ಅಂದಿನಿಂದಲೇ  ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿತ್ತು.ಕಳೆದೆರಡು ದಿಬಗಳಿಂದ  ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.

Uttara Kannada:ಉಪಯೋಗಿಸಿದ ವಸ್ತುಗಳನ್ನು ಮಾರಿಕಾಂಬೆಗೆ ಹರಕೆ ಸಲ್ಲಿಸುವ ಪದ್ಧತಿ

ಒಟ್ಟು 150 ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆಯಲ್ಲಿ ವೈದ್ಯರುಗಳು ಹಾಗೂ ಇಬ್ಬರು ಶಾರ್ಪ್ ಶೂಟರ್​ಗಳು ಬೀಡುಬಿಟ್ಟಿದ್ದಾರೆ. ಇನ್ನೂ ನರಹಂತಕ ಹುಲಿಯ ಚಲನವಲನ ಅರಿಯಲು ಅಲ್ಲಲ್ಲಿ ಸುಮಾರು 35 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಮೂಲಕ ರುದ್ರಗುಪ್ಪೆ ಗ್ರಾಮದ ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ಕೂಂಬಿಂಗ್ ನಡೆಸಲಾಗುತ್ತಿದೆ. ಗ್ರಾಮಗಳ ಜನತೆಗೆ ಅಪಾಯ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು,ಮಾಹಿತಿ ವಿನಿಮಯಕ್ಕಾಗಿ ವಾಟ್ಸಪ್ ಗ್ರೂಪ್​ಗಳನ್ನು ಮಾಡಿಕೊಳ್ಳಲಾಗಿದೆ. ಮತ್ತೊಂದು ಜೀವಕ್ಕೆ ತೊಂದರೆಯಾಗುವ ಮೊದಲು ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಹರಸಾಹಸಪಡುತ್ತಿದೆ.

ಮೂಲಸೌಕರ್ಯವಿಲ್ಲದ ಗುಡ್ಡದ ಮೇಲಿನ ಕುಗ್ರಾಮ, ಪ್ರವಾಸಿಗರ ನೆಚ್ಚಿನ ತಾಣ ಖ್ಯಾತಿ ಗಳಿಸಲು ಕಲಾವಿದನ ಶ್ರಮ!

ಇನ್ನೂ ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮರಾಗಳಲ್ಲಿ ಹುಲಿಯ ಚಲನವಲನ ಕಂಡುಬಂದಿದೆ. ಆದ್ದರಿಂದ ಸುತ್ತಮುತ್ತಲಿನ ಗ್ರಾಮದಲ್ಲಿ ಹುಲಿ ಇರುವುದು ಖಚಿತವಾಗಿದೆ. ಇನ್ನೂ ಹುಲಿ ದಾಳಿಗೆ ಒಬ್ಬರು ಬಲಿಯಾಗಿರುವ ಹಿನ್ನಲೆಯಲ್ಲಿ ಕಾರ್ಮಿಕರು ಭಯಭೀತರಾಗಿದ್ದಾರೆ.  ತೋಟದ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ . ಹುಲಿ ಹಾಗೂ ಆನೆಗಳ ಹಾವಳಿಯಿಂದ ನಮಗೆ ನೆಮ್ಮದಿಯಿಂದ ಕೆಲಸ ಮಾಡಲು ಆಗುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ನಮ್ಮನ್ನು ಹುಲಿಗಳು ಬದುಕಲು ಬಿಡುತ್ತಿಲ್ಲ. ತುಂಬಾ ಸಮಸ್ಯೆಯಾಗುತ್ತಿದ್ದು ಅರಣ್ಯ ಇಲಾಖೆ ಇದುವರೆಗೂ ಯಾವುದೇ ಶಾಶ್ವತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕಾರ್ಮಿಕರು ಆತಂಕ ಹೊರ ಹಾಕಿದ್ದಾರೆ