Asianet Suvarna News Asianet Suvarna News

ಚಕ್ರಾಸನ ರೇಸ್‌ನಲ್ಲಿ ನೂತನ ದಾಖಲೆ ನಿರ್ಮಿಸಿದ ತನುಶ್ರೀ!

100 ಮೀಟರನ್ನು 1.14.14 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ಬರೆದ 10ರ ಬಾಲೆ| ತನುಶ್ರೀಗೆ ದಾಖಲೆಯ ಪ್ರಮಾಣ ಪತ್ರ ಮತ್ತು ಪದಕ ನೀಡಿ ಗೌರವಿಸಿದ ಡಾ. ಮಹೇಶ್‌ ವೈಷ್ಣೋಯಿ|

ಉಡುಪಿ(ಫೆ.24): ಜಿಲ್ಲೆಯ ಉದ್ಯಾವರದ 10 ವರ್ಷದ ತನುಶ್ರೀ ಪಿತ್ರೋಡಿ ಚಕ್ರಾಸನದ ರೀತಿಯಲ್ಲಿ ಬಾಗಿ ಕೈ ಮತ್ತು ಕಾಲುಗಳಿಂದ ಹಿಮ್ಮುಖವಾಗಿ ಚಲಿಸುತ್ತಾ 100 ಮೀಟರ್‌ ದೂರವನ್ನು ಕೇವಲ 1.14.48 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾಳೆ.

ಇದುವರೆಗೆ ಈ ದಾಖಲೆ ಹಿಮಾಚಲ ಪ್ರದೇಶದ ಸಮೀಕ್ಷಾ ಡೋಗ್ರಾ ಎಂಬವರು 100 ಮೀಟರನ್ನು 6 ನಿಮಿಷಗಳ ಅವಧಿಯಲ್ಲಿ ಕ್ರಮಿಸಿದ್ದು ದಾಖಲೆಯಾಗಿತ್ತು. ಶನಿವಾರ ಸ್ಥಳದಲ್ಲಿ ಉಪಸ್ಥಿತರಿದ್ದ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಡಾ. ಮಹೇಶ್‌ ವೈಷ್ಣೋಯಿ ಈ ದಾಖಲೆಯನ್ನು ಪರಿಗಣಿಸಿ, ತನುಶ್ರೀಗೆ ಗೋಲ್ಡನ್‌ ಗರ್ಲ್‌ ಎಂದು ಕರೆದು, ದಾಖಲೆಯ ಪ್ರಮಾಣ ಪತ್ರ ಮತ್ತು ಪದಕ ನೀಡಿ ಗೌರವಿಸಿದ್ದಾರೆ.