Asianet Suvarna News Asianet Suvarna News

ಮಗುಚಿಬಿದ್ದ ನಂದಿನಿ ಲಾರಿ, ಹಾಲಿನ ಪ್ಯಾಕೆಟ್ಸ್‌ ಚೆಲ್ಲಾಪಿಲ್ಲಿ

ಕೊಡಗಿನಲ್ಲಿ ತಿರುವೊಂದರಲ್ಲಿ ನಂದಿನಿ ಹಾಲಿನ ಲಾರಿ ಮಗುಚಿ ಬಿದ್ದ ಘಟನೆ ನಡೆದಿದೆ. ಹಾಲು ಪ್ಯಾಕೆಟ್ ಸಾಗಿಸುತ್ತಿದ್ದ ಲಾರಿ ಮಗುಚಿ ಬಿದ್ದಿದ್ದು, ಮಡಿಕೇರಿ ಸಮೀಪದ ಮೇಕೇರಿ ಮಸೀದಿ ಬಳಿ ಘಟನೆ ನಡೆದಿದೆ.

 

ಮಡಿಕೇರಿ[ಫೆ.21]: ಕೊಡಗಿನಲ್ಲಿ ತಿರುವೊಂದರಲ್ಲಿ ನಂದಿನಿ ಹಾಲಿನ ಲಾರಿ ಮಗುಚಿ ಬಿದ್ದ ಘಟನೆ ನಡೆದಿದೆ. ಹಾಲು ಪ್ಯಾಕೆಟ್ ಸಾಗಿಸುತ್ತಿದ್ದ ಲಾರಿ ಮಗುಚಿ ಬಿದ್ದಿದ್ದು, ಮಡಿಕೇರಿ ಸಮೀಪದ ಮೇಕೇರಿ ಮಸೀದಿ ಬಳಿ ಘಟನೆ ನಡೆದಿದೆ.

ಮಡಿಕೇರಿ ವಿರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿರುವ ಮೇಕೇರಿಯಲ್ಲಿ ಘಟನೆ ನಡೆದಿದ್ದು ಲಾರಿ ಡ್ರೈವರ್ ಸ್ವಾಮಿ‌ ಸೇರಿ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕೂಡಿಗೆ ಮೂರ್ನಾಡು ನಾಪೋಕ್ಲು ಭಾಗಮಂಡಲ ಮಾರ್ಗದ ಹಾಲಿನ ವಾಹನ ಮಗುಚಿಬಿದ್ದಿದ್ದು, ಗಾಯಾಳುಗಳಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರು: ಬಸ್‌ಗಾಗಿ ಕಾಯ್ತಿದ್ದವರ ಮೇಲೆ ಹರಿದ ಬೈಕ್, ಮೂವರು ಸಾವು

ತಡರಾತ್ರಿ 12.30ರ ಸುಮಾರಿಗೆ ಘಟನೆ ನಡೆದಿದ್ದು, ಕತ್ತಲಾದುದರಿಂದ ತಿರುವಿನಲ್ಲಿ ಅಪಘಾತ ಸಂಭವಿಸಿರಬಹುದು ಎನ್ನಲಾಗುತ್ತಿದೆ. ಲಾರಿ ಮಗುಚಿದ ಪರಿಣಾಮ ಲಾರಿಯಲ್ಲಿದ್ದ ಅಷ್ಟೂ ಹಾಲಿನ ಪ್ಯಾಕೆಟ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. 

Video Top Stories