ರಸ್ತೆಗೆ ಉರುಳಿದ ಬಂಡೆ; ಪವಾಡ ಸದೃಶವಾಗಿ ಯುವಕ ಪಾರು

ಗಿರೀಶ ಬುಧವಂತ ನಾಯ್ಕ್ ಎನ್ನುವ ಬೈಕ್ ಸವಾರ ರಾಷ್ಟ್ರೀಯ ಹೆದ್ದಾರಿ 66 ಬೈಕ್‌ ನಲ್ಲಿ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಗುಡ್ಡದ ಮೇಲಿಂದ ಬೃಹತ್ ಕಲ್ಲೊಂದು ಜಾರಿ ರಸ್ತೆಗೆ ಬಿದ್ದಿದೆ. ಬಂಡೆಗಲ್ಲು ಉರುಳಿದ ರಭಸಕ್ಕೆ ಬೈಕ್ ಜಖಂ ಆಗಿದೆ. ಆದರೆ ಅದೃಷ್ಟವಶಾತ್ ಬೈಕ್ ಸವಾರನಿಗೆ ತರಚಿದ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

First Published Jun 11, 2020, 3:39 PM IST | Last Updated Jun 11, 2020, 3:39 PM IST

ಹೊನ್ನಾವರ(ಜೂ.11): ಅದೃಷ್ಟ ಸರಿಯಿದ್ದರೆ ಸಾವು ಕೂಡಾ ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದಕ್ಕೆ ಜೀವಂತ ಉದಾಹರಣೆಯೊಂದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಹೊಸಪಟ್ಟಣ ಎಂಬಲ್ಲಿ ಬೆಳಕಿಗೆ ಬಂದಿದೆ.  

ಗಿರೀಶ ಬುಧವಂತ ನಾಯ್ಕ್ ಎನ್ನುವ ಬೈಕ್ ಸವಾರ ರಾಷ್ಟ್ರೀಯ ಹೆದ್ದಾರಿ 66 ಬೈಕ್‌ ನಲ್ಲಿ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಗುಡ್ಡದ ಮೇಲಿಂದ ಬೃಹತ್ ಕಲ್ಲೊಂದು ಜಾರಿ ರಸ್ತೆಗೆ ಬಿದ್ದಿದೆ. ಬಂಡೆಗಲ್ಲು ಉರುಳಿದ ರಭಸಕ್ಕೆ ಬೈಕ್ ಜಖಂ ಆಗಿದೆ. ಆದರೆ ಅದೃಷ್ಟವಶಾತ್ ಬೈಕ್ ಸವಾರನಿಗೆ ತರಚಿದ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಲ್ಲಿ ಕೊರೋನಾ ವಾರಿಯರ್ಸ್‌ಗೆ ಹೀಗೊಂದು ಗೌರವ

ಅವೈಜ್ಞಾನಿಕ ಚತುಷ್ಪಥ ಹೆದ್ದಾರಿ ಕಾಮಗಾರಿಯೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಹೊನ್ನಾವರದ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.