ಕೊರೋನಾ ವಾರಿಯರ್ಸ್‌ಗೆ ಔತಣಕೂಟ: ಸಚಿವರ ವಿರುದ್ಧ ಸರ್ಕಾರಕ್ಕೆ ದೂರು
ಕೊರೋನಾ ವಾರಿಯರರ್ಸ್‌ಗೆ ಕೊಡಗು ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಔತಣ ಕೂಟ ಏರ್ಪಡಿಸಿರುವ ಬಗ್ಗೆ ಇದೀಗ ಸರ್ಕಾರಕ್ಕೆ ದೂರು ನೀಡಲಾಗಿದೆ. ಇಲ್ಲಿವೆ ಫೋಟೋಸ್
ಕೊಡಗು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ವಿರುದ್ಧ ಸರ್ಕಾರಕ್ಕೆ ದೂರು ನೀಡಲಾಗಿದೆ.
ಮಡಿಕೇರಿಯ ವಕೀಲ ಕೃಷ್ಣಮೂರ್ತಿ ಎಂಬವರು ಸಚಿವರ ವಿರುದ್ಧ ದೂರು ಸಲ್ಲಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಸೇರಿದಂತೆ ಜಿಲ್ಲೆಯ ಕೊರೋನಾ ವಾರಿಯರ್ಸ್ ಔತಣ ಕೂಟದಲ್ಲಿ ಭಾಗವಹಿಸಿದ್ದರು
ಕೊರೊನಾ ವಾರಿಯರ್ಸ್‌ಗಾಗಿ ಔತಣ ಕೂಟ ಆಯೋಜನೆ ಮಾಡಲಾಗಿತ್ತು.
ಬಹುತೇಕ ಎಲ್ಲ ಪೊಲೀಸ್ ಸಿಬ್ಬಂದಿಯೂ ಔತಣಕೂಟದಲ್ಲಿ ಭಾಗಿಯಾಗಿದ್ದರು.
ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಸೋಮಣ್ಣ ಔತಣ ಕೂಟದಲ್ಲಿ
ಸರ್ಕಾರದ ನಿಯಮ ಗಾಳಿಗೆ ತೂರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆರೋಪಿಸಲಾಗಿದೆ.
ಮಡಿಕೇರಿಯ ಕೊಡವ ಸಮಾಜ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಔತಣ ಕೂಟ ನಡೆದಿತ್ತು.
ಜೂ.5 ರಂದು ಕಾರ್ಯಕ್ರಮ ನಡೆದಿದ್ದು, ಉಸ್ತುವಾರಿ ಸಚಿವ ವಿ. ಸೋಮಣ್ಣ ಸಮ್ಮುಖದಲ್ಲಿ ಔತಣಕೂಟ ಆಯೋಜಿಸಲಾಗಿತ್ತು.
ಔತಣಕೂಟದಲ್ಲಿ ಭಾಗವಹಿಸಿದ ಕೊರೋನಾ ವಾರಿಯರ್ಸ್
ಕಾರ್ಯಕ್ರಮ ಆಯೋಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ದೂರು ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಸಚಿವ, ಶಾಸಕರು ಸೇರಿ ಹಲವರು ಭಾಗಿಯಾಗಿದ್ದರು. ಪೊಲೀಸ್, ಆರೋಗ್ಯ ಸಿಬ್ಬಂದಿ ಸೇರಿ ವಿವಿಧ ಇಲಾಖೆಯ ನೂರೈವತ್ತಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, ಕ್ರಮ ಕೈಗೊಳ್ಳದಿದ್ದಲ್ಲಿ ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಜನಪ್ರತಿನಿಧಿಗಳಿಗೊಂದು ನ್ಯಾಯ, ಸಾಮಾನ್ಯ ಜನರಿಗೊಂದು ನ್ಯಾಯ. ಇದನ್ನ ಎಲ್ಲರೂ ಖಂಡಿಸಬೇಕು. ಸರ್ಕಾರದ ನಿಯಮ ಎಲ್ಲರಿಗೂ ಒಂದೇ ಎಂದು ಕೃಷ್ಣಮೂರ್ತಿ ತಿಳಿಸಿದ್ದಾರೆ.