Udupi: ನಿರ್ವಹಣೆಯಿಲ್ಲದೇ ಮೂಲೆ ಸೇರಿರುವ ಡಯಾಲಿಸಿಸ್ ಯಂತ್ರಗಳು, ರೋಗಿಗಳ ಪರದಾಟ
- ರಾಜ್ಯಾದ್ಯಂತ ಡಯಾಲಿಸಿಸ್ ಕೇಂದ್ರಗಳ ಅವ್ಯವಸ್ಥೆ
- ಹಿಂದಿನ ಸಿದ್ದರಾಮಯ್ಯ ಸರ್ಕಾರ ಮಾಡಿದ ಎಡವಟ್ಟು
- ನಿರ್ವಹಣೆಯಿಲ್ಲದೇ ಮೂಲೆ ಸೇರಿರುವ ಯಂತ್ರಗಳು
ಉಡುಪಿ (ನ. 21): ರಾಜ್ಯದ 23 ಜಿಲ್ಲೆಗಳಲ್ಲಿ ಬಿ.ಆರ್.ಎಸ್ ವೆಂಚರ್ಸ್ ಡಯಾಲಿಸೀಸ್ ( Dialysis) ವ್ಯವಸ್ಥೆಯ ಜವಾಬ್ದಾರಿ ಪಡೆದಿದೆ. ಉಡುಪಿ (Udupi) ಮೂಲದ ದುಬೈನ ಉದ್ಯಮಿ ಬಿಆರ್ ಶೆಟ್ಟಿ (BR Shetty) ಬಿಆರ್ ಎಸ್ ವೆಂಚರ್ಸ್ ನ ಮುಖ್ಯಸ್ಥರು. ದುಬೈನಲ್ಲಿ ಶೆಟ್ಟಿ ನಿರ್ಮಿಸಿದ್ದ ಬಹುಕೋಟಿ ಸಾಮ್ರಾಜ್ಯ ದಿವಾಳಿಯಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದೆ.
Yakshagana : 2 ವರ್ಷಗಳ ಬಳಿಕ ಯಕ್ಷಗಾನ ಮೇಳಗಳ ತಿರುಗಾಟ ಆರಂಭ
ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೇಲೂ ಇದರ ಪರಿಣಾಮ ಉಂಟಾಗಿದೆ. ಬಿ. ಆರ್ ಎಸ್ ವೆಂಚರ್ಸ್ ನವರು ಜಿಲ್ಲಾಸ್ಪತ್ರೆಗಳ ಡಯಾಲಿಸೀಸ್ ನಿರ್ವಹಣೆ ಸಾಧ್ಯವಿಲ್ಲ ಎಂದು ಕೈ ಎತ್ತಿದ್ದಾರೆ. ಮೇ ತಿಂಗಳಿನಿಂದ ಸಿಬ್ಬಂದಿಗಳಿಗೆ ವೇತನ ಕೂಡಾ ನೀಡಿಲ್ಲ. ಡಯಾಲಿಸಿಸ್ ಗೆ ಬೇಕಾದ ಉಪಕರಣಗಳ ಸರಬರಾಜು ನಿಂತಿದೆ. ತುರ್ತು ಸಂದರ್ಭದಲ್ಲಿ ಜಿಲ್ಲಾ ಆಸ್ಪ ತ್ರೆಗಳು ತಮ್ಮದೇ ನಿಧಿಯಿಂದ ಉಪಕರಣಗಳನ್ನು ವ್ಯವಸ್ಥೆ ಮಾಡಿವೆ.
ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು ಹತ್ತು ಡಯಾಲಿಸಿಸ್ ಯಂತ್ರಗಳಿವೆ. ಪ್ರತಿದಿನ 30 ಮಂದಿಗೆ ಡಯಾಲಿಸಿಸ್ ಮಾಡಲಾಗುತ್ತೆ. ಯಂತ್ರಗಳ ಪೈಕಿ ನಾಲ್ಕು ಯಂತ್ರಗಳು ಹಾಳಾಗಿವೆ. ಯಂತ್ರಗಳ ಹಣ ಪಾವತಿ ಮಾಡಿದ ಕಾರಣ ರಿಪೇರಿ ಸಾಧ್ಯವಾಗುತ್ತಿಲ್ಲ. ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಡಯಾಲಿಸಿಸ್ ನಡೆಯದೇ ಹೋದರೆ, ಕಿಡ್ನಿ ಪೇಶೆಂಟು ಗಳ ಜೀವಕ್ಕೆ ಅಪಾಯವಿದೆ. ರೋಗಿಗಳ ಜೀವದ ಜೊತೆ , ಚೆಲ್ಲಾಟವಾಡದೆ ಅತಿಶೀಘ್ರವಾಗಿ ಖಾಸಗಿ ಇಂದ ಈ ವ್ಯವಸ್ಥೆಯನ್ನು ಸರಕಾರ ನಿಯಂತ್ರಣಕ್ಕೆ ಪಡೆಯಬೇಕಾಗಿದೆ.