Organic Paddy : ಸಂಪೂರ್ಣ ಸಾವಯವ ಉಡುಪಿ ಕೇದಾರ ಕಜೆ ಅಕ್ಕಿ ಶೀಘ್ರ ಮಾರುಕಟ್ಟೆಗೆ
ಉಡುಪಿಯಲ್ಲಿ ಈ ಬಾರಿ ಹಡಿಲು ಬಿಟ್ಟಿದ್ದ ಭೂಮಿಯಲ್ಲಿ ಭತ್ತದ ಕೃಷಿ ಮಾಡಲಾಗಿತ್ತು . ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಸುಮಾರು ಎರಡು ಎಕರೆಗಳಷ್ಟು ಪ್ರದೇಶದಲ್ಲಿ ಅಪಾರ ಪ್ರಮಾಣದ ಭತ್ತ ಬೆಳೆಯಲಾಗಿದೆ. ಸಂಪೂರ್ಣ ಸಾವಯವವಾಗಿ ಬೆಳೆದ ಅಕ್ಕಿ ಶೀಘ್ರ ಕುಚ್ಚಲಕ್ಕಿಯಾಗಿ ಮಾರುಕಟ್ಟೆಗೆ ಬರಲಿದೆ
ಉಡುಪಿ (ಡಿ.11) : ಉಡುಪಿಯಲ್ಲಿ ಈ ಬಾರಿ ಹಡಿಲು ಬಿಟ್ಟಿದ್ದ ಭೂಮಿಯಲ್ಲಿ ಭತ್ತದ ಕೃಷಿ ಮಾಡಲಾಗಿತ್ತು . ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಸುಮಾರು ಎರಡು ಎಕರೆಗಳಷ್ಟು ಪ್ರದೇಶದಲ್ಲಿ ಅಪಾರ ಪ್ರಮಾಣದ ಭತ್ತ ಬೆಳೆಯಲಾಗಿದೆ. ಇದೀಗ ಮಳೆ ಕಡಿಮೆಯಾಗುತ್ತಿದ್ದಂತೆ ಭತ್ತದ ಕಟಾವು ಕಾರ್ಯ ಮುಗಿದಿದ್ದು , ಉಡುಪಿಯ ಕೇದಾರ ಕಜೆ ಎಂಬ ಬ್ರಾಂಡ್‌ನಲ್ಲಿ ಈ ಕುಚ್ಚಿಗೆ ಅಕ್ಕಿಯನ್ನು ಮಾರಾಟ ಮಾಡಲು ಚಿಂತನೆ ನಡೆದಿದೆ . ಈ ಪ್ರಯುಕ್ತ ಉಡುಪಿಯ ಶ್ರೀ ಕೃಷ್ಣನಿಗೆ ಕೇದಾರ ಕಜೆಯ ಮೊದಲ ಫಸಲನ್ನು ಅರ್ಪಿಸಲಾಯಿತು.
Support Price For Paddy : ರೈತರಿಗೆಗುಡ್ ನ್ಯೂಸ್ : ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ
ಸಂಪೂರ್ಣ ಸಾವಯವ ಕುಚ್ಚಲಕ್ಕಿ "ಉಡುಪಿ ಕೇದಾರ ಕಜೆ" ಹೆಸರಿನಲ್ಲಿ ಮಾರುಕಟ್ಟೆಗೆ ಬರಲಿದ್ದು, ಸುಮಾರು 100 ಕೆ.ಜಿ ಭತ್ತವನ್ನು ಬೆಳ್ತಿಗೆ ಅಕ್ಕಿಯನ್ನಾಗಿ ಮಾಡಿ ಶ್ರೀಕೃಷ್ಣ ದೇವರಿಗೆ ಸಮರ್ಪಿಸಲಾಯ್ತು. ಬಳಿಕ ಪರ್ಯಾಯ ಅದಮಾರು ಮಠದ ಶ್ರೀ ಶ್ರೀ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಸೋಲೂರು ಆರ್ಯ ಈಡಿಗ ಸಂಸ್ಥಾನದ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಕರಾವಳಿ ಜಿಲ್ಲೆಗಳು ಸೇರಿದಂತೆ ಮುಂಬೈ ಬೆಂಗಳೂರಿನಲ್ಲಿ ಕೇದಾರ ಅಕ್ಕಿಯನ್ನು ಮಾರಾಟ ಮಾಡಲು ಆನ್ ಲೈನ್ ವ್ಯವಸ್ಥೆ ಜಾರಿಗೆ ಬರಲಿದೆ. ಡಿಸೆಂಬರ್ ಮಾಸಾಂತ್ಯದಲ್ಲಿ ಸ್ವತಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆನ್ಲೈನ್ ಮಾರಾಟಕ್ಕೆ ಚಾಲನೆ ನೀಡಲಿದ್ದಾರೆ.