ಕಾರವಾರಕ್ಕೆ ಶಾಪವಾಗಿದೆ ರಾಜಕಾಲುವೆ, ತುಂಬಿ ಹೋಗಿದೆ ಕಲ್ಮಶ, ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ!
ಕಾರವಾರ ನಗರಕ್ಕೆ ಎಂಟ್ರಿಯಾಗುತ್ತಿದ್ದಂತೆ ಗಬ್ಬು ವಾಸನೆ ಸ್ವಾಗತಿಸುತ್ತದೆ. ಇಲ್ಲಿನ ಜನರು ರಸ್ತೆಯಲ್ಲಿ ಓಡಾಡುವಾಗ ಮೂಗು ಮುಚ್ಚಿಕೊಂಡೇ ಓಡಾಡುವ ಸ್ಥಿತಿ ಇದೆ. ನಗರದ ಕೊಳಚೆ ನೀರು, ಇಲ್ಲಿನ ರಾಜಕಾಲುವೆಗೆ ಸೇರುತ್ತದೆ. ಇಲ್ಲಿಂದ ಸಮುದ್ರ ಸೇರುತ್ತದೆ.
ಉತ್ತರ ಕನ್ನಡ (ಮಾ. 04): ಕಾರವಾರ ನಗರಕ್ಕೆ ಎಂಟ್ರಿಯಾಗುತ್ತಿದ್ದಂತೆ ಗಬ್ಬು ವಾಸನೆ ಸ್ವಾಗತಿಸುತ್ತದೆ. ಇಲ್ಲಿನ ಜನರು ರಸ್ತೆಯಲ್ಲಿ ಓಡಾಡುವಾಗ ಮೂಗು ಮುಚ್ಚಿಕೊಂಡೇ ಓಡಾಡುವ ಸ್ಥಿತಿ ಇದೆ. ನಗರದ ಕೊಳಚೆ ನೀರು, ಇಲ್ಲಿನ ರಾಜಕಾಲುವೆಗೆ ಸೇರುತ್ತದೆ. ಇಲ್ಲಿಂದ ಸಮುದ್ರ ಸೇರುತ್ತದೆ.
ರಮೇಶ್ ರಾಸಲೀಲೆ ಪ್ರಕರಣ ; ಯಾರ್ಯಾರು, ಏನೇನಂದ್ರು.?
ಇಲ್ಲಿನ ಕೊಳಚೆ ನೀರಿನಿಂದ ಜನರಿಗೆ ಆಗುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಈ ಕಾಲುವೆ ಸ್ವಚ್ಛತೆಗೆ ಪ್ರತಿವರ್ಷ ಕೋಟಿಗಟ್ಟಲೇ ಹಣ ವ್ಯಯಿಸುತ್ತಿದ್ದರೂ, ಈವರೆಗೂ ಸ್ವಚ್ಛತಾ ಕಾರ್ಯ ಮಾತ್ರ ನಡೆದಿಲ್ಲ. ಇನ್ನು ಇಲ್ಲಿನ ಸುತ್ತಮುತ್ತಲಿನ ಬಾವಿ ನೀರು ಕೂಡಾ ಕಲುಷಿತವಾಗಿದೆ.