Asianet Suvarna News Asianet Suvarna News

ಚಿನ್ನದ ವ್ಯಾಪಾರಿಗಳಿಗೆ ಐಟಿ ಶಾಕ್: ಬೆಂಗಳೂರಿನ 25 ಕಡೆ ದಾಳಿ

ಬೆಂಗಳೂರಿನ ಚಿನ್ನದ ವ್ಯಾಪಾರಿಗಳಿಗೆ ಬೆಳ್ಳಂಬೆಳಗ್ಗೆ ಐಟಿ ಶಾಕ್‌ ನೀಡಿದ್ದು, ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಚಿನ್ನದ ವ್ಯಾಪಾರಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ.

ಬೆಂಗಳೂರಿನ ಸುಮಾರು 25ಕ್ಕೂ ಹೆಚ್ಚು ಚಿನ್ನದ ಅಂಗಡಿಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಯನಗರ, ಯಶವಂತಪುರ, ಬಸವನಗುಡಿ ಹಾಗೂ ಚಿಕ್ಕಪೇಟೆ ಸೇರಿ ಹಲವೆಡೆ ಶೋಧ ನಡೆಸಿದ್ದಾರೆ. ಜಯನಗರದ ರಾಜೇಶ್‌ ಕುಮಾರ್‌ ಜೈನ್‌ ಮನೆ ಮೇಲೆ ದಾಳಿ ಮಾಡಲಾಗಿದ್ದು, ಅವರು ಬನಶಂಕರಿಯಲ್ಲಿರುವ ಅವರ ಪಾರ್ಶ್ವ ಫಾರ್ಮಾಸಿಟಿಕಲ್‌ ಬ್ಯುಸಿನೆಸ್‌ ಜ್ಯೂವೆಲ್ಲರಿ ಶಾಪ್‌ ನಡೆಸುತ್ತಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ರಿಲೀಸ್ ವಿಳಂಬ?: ಬಂಡಾಯದ ಬೆಂಕಿಗೆ ರಾಜ್ಯ ಕಾಂಗ್ರೆಸ್‌ ನಡುಕ

Video Top Stories