ಹನುಮ ಸಂಕೀರ್ತನಾ ಯಾತ್ರೆಗೆ ಮುಸ್ಲಿಂ ಸಂಘಟನೆಗಳ ವಿರೋಧ: ಅನಾಹುತ ಸಂಭವಿಸಿದ್ರೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ !
ಜಾಮಿಯಾ ಮಸೀದಿ ಜಾಗದಲ್ಲಿ ಮತ್ತೆ ಹನುಮ ಮಂದಿರ ನಿರ್ಮಾಣ ಸಂಕಲ್ಪ
ಸಂಕೀರ್ತನಾ ಯಾತ್ರೆಯಲ್ಲಿ ಸಾವಿರಾರು ಹನುಮಾ ಮಾಲಾಧಾರಿಗಳು ಭಾಗಿ
ಕಳೆದ ವರ್ಷ ಸಂಕೀರ್ತನಾ ಯಾತ್ರೆ ವೇಳೆ ಮುಸ್ಲಿಮರ ಮನೆಗಳ ಮೇಲೆ ದಾಳಿ
ಜಾಮೀಯಾ ಮಸೀದಿ ವಿವಾದ(Jamia Masjid controversy) ಮತ್ತೆ ಸುದ್ದಿಗೆ ಬಂದಿದೆ. ಹನುಮ ಸಂಕೀರ್ತನಾ ಯಾತ್ರೆಗೆ(Hanuma Sankirtana Yatra) ಪರ-ವಿರೋಧದ ಚರ್ಚೆ ಕೇಳಿಬಂದಿದೆ. ಹಿಂದೂ-ಮುಸ್ಲಿಮರ ನಡುವೆ ಯಾತ್ರೆಗೆ ತಿಕ್ಕಾಟ ಶುರುವಾಗಿದೆ. ಸಂಕೀರ್ತನಾ ಯಾತ್ರೆಗೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಟಿಪ್ಪು ಜಯಂತಿ(Tippu Jayanti) ರ್ಯಾಲಿ ನಿರ್ಬಂಧಿಸಿ, ಸಂಕೀರ್ತನಾ ಯಾತ್ರೆಗೆ ಅನುಮತಿ ಕೊಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಡೆಗೆ ಖಂಡನೆ ವ್ಯಕ್ತಪಡಿಸಲಾಗುತ್ತಿದೆ. ಶಾಂತಿ ಸೌಹಾರ್ದತೆ ಕದಡುವ ಯತ್ನ ಇದು ಎಂದು ಆರೋಪ ಮಾಡಲಾಗಿದೆ. ಯಾತ್ರೆಗೆ ಅನುಮತಿ ನೀಡದಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ. ಡಿ.24ರಂದು ಮಂಡ್ಯದ(Mandya) ಶ್ರೀರಂಗಪಟ್ಟಣದಲ್ಲಿ ಯಾತ್ರೆ ಆಯೋಜನೆ ಮಾಡಲಾಗಿದೆ. ಹನುಮ ಜಯಂತಿ ಹಿನ್ನೆಲೆಯಲ್ಲಿ ಸಂಕೀರ್ತನಾ ಯಾತ್ರೆ ನಡೆಯಲಿದೆ. ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಕಾರ್ಯಕ್ರಮ. ಮೂಡಲ ಬಾಗಿಲು ಆಂಜನೇಯಸ್ವಾಮಿ ಪುನರ್ ಪ್ರತಿಷ್ಠಾಪನೆ ಸಂಕಲ್ಪದೊಂದಿಗೆ ಯಾತ್ರೆ ನಡೆಯಲಿದೆ. ಈ ಯಾತ್ರೆಯಲ್ಲಿ ಸಾವಿರಾರು ಹನುಮ ಮಾಲಾಧಿಕಾರಿಗಳು ಭಾಗಿಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಯಾತ್ರೆ ವೇಳೆ ಮುಸ್ಲಿಮರ ಮನೆಗಳ ಮೇಲೆ ದಾಳಿ ನಡೆದಿತ್ತು.ಯಾತ್ರೆಗೆ ಅನುಮತಿ ನೀಡಿ ಅನಾಹುತ ಸಂಭವಿಸಿದ್ರೆ ಸರ್ಕಾರವೇ ಹೊಣೆ ಎಂಬ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ವೀಕ್ಷಿಸಿ: ಸಿದ್ದರಾಮಯ್ಯ ಕನಸಿನ ಯೋಜನೆಗೆ ಕಳ್ಳರ ಕನ್ನ! ವಿಜಯಪುರದ ಅಂಗಡಿಗಳಲ್ಲೂ ಎಗ್ಗಿಲ್ಲದೆ ಅನ್ನಭಾಗ್ಯ ಅಕ್ಕಿ ಖರೀದಿ...!