ಸಿದ್ದರಾಮಯ್ಯ ಕನಸಿನ ಯೋಜನೆಗೆ ಕಳ್ಳರ ಕನ್ನ! ವಿಜಯಪುರದ ಅಂಗಡಿಗಳಲ್ಲೂ ಎಗ್ಗಿಲ್ಲದೆ ಅನ್ನಭಾಗ್ಯ ಅಕ್ಕಿ ಖರೀದಿ...!

ಹಣದಾಸೆಗೆ ಎಗ್ಗಿಲ್ಲದೆ ಅನ್ನ ಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ..!
ಅಕ್ಕಿ ಕಳ್ಳರನ್ನ ರೆಡ್ ಹ್ಯಾಂಡ್‌ಆಗಿ ಹಿಡಿದಿದೆ ಏಷ್ಯಾನೆಟ್ ಸುವರ್ಣ ನ್ಯೂಸ್.!
ಏಷ್ಯಾನೆಟ್ ಸುವರ್ಣ ನ್ಯೂಸ್ ರಹಸ್ಯ ಕ್ಯಾಮರಾದಲ್ಲಿ ದಂಧೆಕೋರರು ಸೆರೆ

First Published Dec 22, 2023, 12:29 PM IST | Last Updated Dec 22, 2023, 12:29 PM IST

ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆಗೆ ಕಳ್ಳರು ಕನ್ನ ಹಾಕುತ್ತಿದ್ದು, ಈ ಏಷ್ಯಾನೆಟ್‌ ಸುವರ್ಣ ನ್ಯೂಸ್‌ BIG EXCLUSIVE ಸುದ್ದಿಯೊಂದನ್ನು ಬಿತ್ತರಿಸುತ್ತಿದೆ. ಬಡವರ ಹೊಟ್ಟೆ ತುಂಬಿಸಲು ಜಾರಿಯಾದ ಯೋಜನೆಗೆ ಕನ್ನ ಹಾಕಲಾಗುತ್ತಿದ್ದು, ವಿಜಯಪುರದಲ್ಲಿ(Vijayapura) ಅನ್ನಭಾಗ್ಯ ಯೋಜನೆ ಹಳ್ಳ ಹಿಡಿಯುತ್ತಿದೆ. ಒಂದೇ ವರ್ಷದಲ್ಲಿ 20 ಅಕ್ರಮ‌ ಅನ್ನಭಾಗ್ಯ(Anna Bhagya) ಅಕ್ಕಿದಂಧೆಯ ಕೇಸ್‌ಗಳು ಪತ್ತೆಯಾಗಿದ್ದು, ಅಕ್ಕಿ ಮಾರುತ್ತಿದ್ದ 26 ಜನರ ಮೇಲೆ‌ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ(Maharashtra) ಅನ್ನ ಭಾಗ್ಯ ಅಕ್ಕಿಗೆ ಇನ್ನಿಲ್ಲದ ಬೇಡಿಕೆ ಇದ್ದು,ಅಲ್ಲಿನ ಹೋಟೆಲ್‌ಗಳಲ್ಲಿ(Hotels) ಇಡ್ಲಿ, ದೋಸೆಗೆ ಅನ್ನಭಾಗ್ಯ ಅಕ್ಕಿಯೇ ಆಧಾರವಾಗಿದೆ. ಹಣದಾಸೆಗೆ ಎಗ್ಗಿಲ್ಲದೆ ಅನ್ನ ಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಜನರಿಗೆ ಹಣದಾಸೆ ತೋರಿಸಿ ಅನ್ನಭಾಗ್ಯ ಅಕ್ಕಿ ಖರೀದಿ ಮಾಡಲಾಗುತ್ತಿದೆ. ಈ ಗ್ಯಾಂಗ್‌ ಮನೆ ಮನೆಗಳಿಂದಲೇ ಅನ್ನಭಾಗ್ಯ ಅಕ್ಕಿ ಖರೀದಿಸುತ್ತದೆ. ಕೆ.ಜಿಗೆ 15 ರಿಂದ 16 ರೂಪಾಯಿ‌ ನೀಡಿ‌‌ ಖರೀದಿ ಮಾಡಲಾಗುತ್ತದೆ.

ಇದನ್ನೂ ವೀಕ್ಷಿಸಿ:  ಶಾರುಖ್ ಖಾನ್ ಮನೆಗೆ ಇಷ್ಟೊಂದು ಸೆಕ್ಯುರಿಟಿನಾ..? ಏರ್‌ಪೋರ್ಟ್‌ನಲ್ಲಿ ಮಾಡುವ ಚೆಕಪ್ ತರ ಇದೆಯಲ್ಲ !

Video Top Stories