Asianet Suvarna News Asianet Suvarna News

ಕಾರವಾರ: 2 ತಿಂಗಳಿಂದ ಎಂಡೋಸಲ್ಫಾನ್ ಪೀಡಿತರಿಗೆ ಸಿಗುತ್ತಿಲ್ಲ ಚಿಕಿತ್ಸೆ, ಔಷಧ

Jun 9, 2021, 8:52 AM IST

 ಉತ್ತರ ಕನ್ನಡ (ಜೂ.09) : ಆಹಾರ, ಬಟ್ಟೆ, ಔಷಧ, ಶೌಚ ಸೇರಿದಂತೆ ಹಲವು ವಿಚಾರಕ್ಕೆ ಇನ್ನೊಬ್ಬರನ್ನು ಅವಲಂಬಿಸಬೇಕಾಗಿರುವ ಎಂಡೋ ಪೀಡಿತರ ಬಗ್ಗೆ ಸರಕಾರ ನಿರ್ಲಕ್ಣ್ಯ ವಹಿಸಿದೆ.

ಲಾಕ್‌ಡೌನ್‌ ತಂದ ಸಂಕಷ್ಟ: ಒಪ್ಪತ್ತಿನ ಊಟಕ್ಕೂ ಪರದಾಡುತ್ತಿರುವ ಕುಟುಂಬ..!

ಎಂಡೋಸಲ್ಫಾನ್ ಭಾದಿತ ಜಿಲ್ಲೆಗಳಲ್ಲಿ ಉತ್ತರಕನ್ನಡ ಕೂಡಾ ಒಂದಾಗಿದ್ದು, ಜಿಲ್ಲೆಯಾದ್ಯಂತ ಸುಮಾರು ಎರಡು ಸಾವಿರ ಪೀಡಿತರು ಇದ್ದಾರೆ. ಆದರೆ, ಕಳೆದ ಎರಡು ತಿಂಗಳಿನಿಂದ ಈ ಪೀಡಿತರಿಗೆ   ಚಿಕಿತ್ಸೆಯೂ ಇಲ್ಲ, ಔಷಧವೂ ಇಲ್ಲದಂತಾಗಿದೆ.   ಕೊರೊನಾ, ಲಾಕ್ ಡೌನ್ ಜಾರಿಯಾಗಿರುವ ಈ ಸಂದರ್ಭದಲ್ಲಿ ಪೀಡಿತರ ಕುಟುಂಬಸ್ಥರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona