ಲಾಕ್‌ಡೌನ್‌ ತಂದ ಸಂಕಷ್ಟ: ಒಪ್ಪತ್ತಿನ ಊಟಕ್ಕೂ ಪರದಾಡುತ್ತಿರುವ ಕುಟುಂಬ..!

* ದಯನೀಯವಾದ ತಾಯಿ ಮಕ್ಕಳ ಸ್ಥಿತಿ 
* ಕುಟುಂಬಕ್ಕೆ ನೆರವು ನೀಡುವ ಕೈಗಳು ಬೇಕಾಗಿದೆ
* ಒಪ್ಪೊತ್ತಿನ ಊಟದ ಅಕ್ಕಿಗೂ ತತ್ವಾರ ಎದುರಿಸುತ್ತಿರುವ ಬಡಕುಟುಂಬ 

This Family Faces Food Problem due to Lockdown at Ankola in Uttara Kannada grg

ರಾಘು ಕಾಕರಮಠ

ಅಂಕೋಲಾ(ಮೇ.21): ಇದು ಕೂಲಿ ಕೆಲಸಕ್ಕೆ ವಲಸೆ ಬಂದ ಕುಟುಂಬವೊಂದರ ವ್ಯಥೆಯ ಕಥೆ. ಇನ್ನು ಪ್ರಪಂಚದ ಜ್ಞಾನ ಬರದ ಇಬ್ಬರು ಹೆಣ್ಣು ಮಕ್ಕಳು ಹಾಗೂ ಹಾಸಿಗೆ ಹಿಡಿದಿರುವ ಗಂಡನನ್ನು ಸಾಕಲು ಭಿಕ್ಷಾಟನೆಗೆ ಇಳಿದಿರುವ ಮಹಿಳೆಯೊಬ್ಬಳ ಮನಕಲುಕುವ ವ್ಯಥೆ. ಹೌದು.. ಕೂಲಿ ಕೆಲಸಕ್ಕೆಂದು ಅಂಕೋಲಾಕ್ಕೆ ಬಂದು ನಿರ್ಗತಿಕರಾಗಿ ಒಪ್ಪತ್ತಿನ ಊಟಕ್ಕು ಪರದಾಡುತ್ತಿರುವ ಕುಟುಂಬವೊಂದು ಅಂಕೋಲಾದ ಹುಲಿದೇವರವಾಡಾದದಲ್ಲಿ ದಯನೀಯ ಸ್ಥಿತಿಯಲ್ಲಿದೆ.

ಇವರ ಆಂಕ್ರದನವೇನು..?

ಕಳೆದ ನಾಲ್ಕು ವರ್ಷದ ಹಿಂದೆ ಹುಬ್ಬಳ್ಳಿಯಿಂದ ಮಲ್ಲೆಶೀ ಕಾಳೆ ತನ್ನ ಕುಟುಂಬವನ್ನು ಕರೆದುಕೊಂಡು ಅಂಕೋಲಾ ಕೂಲಿ ಕೆಸ ಅರಿಸಿಕೊಂಡು ಬಂದಿದ್ದ. ಒಂದೆರಡು ವರ್ಷ ಚೆನ್ನಾಗಿಯೆ ಇದ್ದ ಈ ಕುಟುಂಬದ ಆಧಾರವಾಗಿದ್ದ ಈತನಿಗೆ ಕಾಯಿಲೆ ಬಂದು ಕೆಲಸ ಮಾಡಲಿಕ್ಕೆ ಆಗದೆ ಹಾಸಿಗೆ ಹಿಡಿದು ಬಿಟ್ಟಿದ್ದ.

ಈತನಿಗೆ ಎರಡು ಹೆಣ್ಣು ಮಕ್ಕಳು. ದಿನ ಕಳೆದಂತೆ ಇವರ ಕುಟುಂಬಕ್ಕೆ ಜೀವನ ನಡೆಸೋದು  ಕಷ್ಟವಾಗತೊಡಗಿತು. ಬಳಿಕ ಈತನ ಹೆಂಡತಿ ಮಂಜುಳಾ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಭಾರಿ ಕೆಲಸ ಮಾಡಲಾಗದ ಪರಿಸ್ಥಿತಿ ಇತಳದಾಗಿತ್ತು.

ಅಂಕೋಲಾ: ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಮಗಳು

ನಂತರ ಇಬ್ಬರು ಹೆಣ್ಣು ಮಕ್ಕಳು ಹಾಗೂ ಹಾಸಿಗೆ ಹಿಡಿದಿರುವ ಗಂಡನನ್ನು ಸಾಕಲು ಅನಿವಾರ್ಯವಾಗಿ ಈತನ ಹೆಂಡತಿ ತನ್ನ ಮಕ್ಕಳಿಗೆ ಜೊತೆಗೆ ಕರೆದುಕೊಂಡು ದೇವಸ್ಥಾನದ ಎದುರು ಬಿಕ್ಷಾಟನೆ ಮಾಡಿಕೊಂಡು ತನ್ನ ಕುಟುಂಬದ ಜೀವನವನ್ನು ಸಾಗಿಸುತ್ತಿದ್ದಳು. ಈಗ ಕೋವಿಡ್‌ನಿಂದ ಎಲ್ಲಾ ದೇವಸ್ಥಾನದ ಬಾಗಿಲು ಬಂದಾಗಿದೆ. ದೇವಸ್ಥಾನಕ್ಕೆ ಜನರು ಬರುವುದಿಲ್ಲ. ಇದರಿಂದಾಗಿ ಇವರಿಗೆ ಈಗ ಜೀವನ ನಡೆಸೊದು ತುಂಬಾ ಕಷ್ಟಕರವಾಗುವಂತಾಗಿದೆ. ಈಗ ಮನೆಯಲ್ಲಿ ಒಪ್ಪೊತ್ತಿನ ಊಟದ ಅಕ್ಕಿಗೂ ತತ್ವಾರ ಎದುರಿಸುತ್ತಿದ್ದಾರೆ.  

ಇವರಿಗೆ ಇದುವರೆಗೂ ಆಧಾರ್‌, ರೇಶನ್‌ ಕಾರ್ಡ್‌ ಯಾವುದು ಇಲ್ಲದೆ ಇವರಿಗೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಅಸಾದ್ಯವಾಗಿದೆ. ಸದ್ಯ ಇವರು ಹುಲಿದೇವರವಾಡಾದ ಮನೆಯೊಂದರಲ್ಲಿ ಬಾಡಿಗೆಗೆ ಇದ್ದು ಬಾಡಿಗೆ ಕಟ್ಟಲಾರದ ಪರಿಸ್ಥಿತಿ ಬಂದೊದಗಿದೆ.

ಈ ತಾಯಿ ಮಕ್ಕಳ ಸ್ಥಿತಿ ದಯನೀಯವಾಗಿದೆ. ಒಪ್ಪೊತ್ತಿನ ಊಟಕ್ಕು ಪರದಾಡುತ್ತಿರುವ ಈ ಕುಟುಂಬಕ್ಕೆ ನೆರವು ನೀಡುವ ಕೈಗಳು ಬೇಕಾಗಿದೆ. ದಯವಿಟ್ಟು ಸಹೃದಯಿಗಳು ಸಹಾಯ ಹಸ್ತ ನೀಡಿ. ಹಾಗೆ ಸರಕಾರದ ಸೌಲಭ್ಯ ನೀಡಲು ಕ್ರಮ ಕೈಗೊಳ್ಳುವಂತಾಗಬೇಕು ಎಂದು ಅಂಕೋಲಾ ಪುರಸಭೆ ಸದಸ್ಯ ಮಂಜುನಾಥ ನಾಯ್ಕ ತಿಳಿಸಿದ್ದಾರೆ.

ಹಾಸಿಗೆ ಹಿಡಿದಿರುವ ಗಂಡನ ಹಾಗೂ ಮಕ್ಕಳ ಒಪ್ಪೋತ್ತಿನ ಊಟಕ್ಕಾಗಿ ನಾನು ಬೀಕ್ಷಾಟನೆಗೆ ಇಳಿದೆ. ಈಗ ಕೊರೋನಾ ಕಾರಣದಿಂದ ದೇವಸ್ಥಾನದ ಬಾಗಿಲು ಮುಚ್ಚಿದೆ. ನಾನು ಏನು ಮಾಲೆಂದು ಅರ್ಥವಾಗುತ್ತಿಲ್ಲ. ನನ್ನಂಥವರ ಸ್ಥಿತಿ ಯಾರಿಗೂ ಬರಬಾರದು ಎಂದು ಮಂಜುಳಾ ಮಲ್ಲೇಶಿ ಕಾಳೆ ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Latest Videos
Follow Us:
Download App:
  • android
  • ios