Asianet Suvarna News Asianet Suvarna News

ವಿಜಯನಗರ ಪೊಲೀಸರ ಕೈಯಲ್ಲಿ ಹೈಟೆಕ್ ಡಿಜಿಟಲ್ ವಾಕಿ-ಟಾಕಿ !

ವಿಜಯನಗರ ಜಿಲ್ಲಾ ಪೊಲೀಸರು ಹೈಟೆಕ್‌ ತಂತ್ರಜ್ಞಾನದ ಮೊರೆ ಹೋಗಿದ್ದು, ಅತ್ಯಾಧುನಿಕ ತಂತ್ರಜ್ಞಾನದ  ಡಿಜಿಟಲ್ ವಾಕಿ- ಟಾಕಿ ನೀಡಲಾಗಿದೆ.
 

ವಿಜಯನಗರ: ನೂತನ ವಿಜಯನಗರ ಜಿಲ್ಲಾ ಪೊಲೀಸರು(Vijayanagar Police) ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಸುಗಮ ಸಂಹವನಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಹೈಟೆಕ್ ಡಿಜಿಟಲ್ ವಾಕಿ- ಟಾಕಿ(walkie-talkie) ನೀಡಲಾಗಿದೆ. ವಿಐಪಿ, ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ಜಿಲ್ಲೆ ಸೇರಿದಂತೆ ಪ್ರತ್ಯೇಕ ನಾಲ್ಕು ಚಾನಲ್‌ಗಳನ್ನು ಮಾಡಲಾಗಿದೆ. 23 ಪೊಲೀಸ್ ಠಾಣೆ, 5 ಉಪ ಠಾಣೆಗಳಲ್ಲಿ ಒಟ್ಟು 390 ವಾಕಿ-ಟಾಕಿಗಳನ್ನು ನೀಡಲಾಗಿದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗುವಾಗ, ಅದೇ ವಾಕಿ, ಟಾಕಿ ಕ್ಯಾರಿ ಮಾಡಬಹುದಾಗಿದೆ. ಈ ಹಿಂದೆ ಬೇರೆ ಜಿಲ್ಲೆಗಳಿಗೆ ಹೋದಾಗ, ಪ್ರತ್ಯೇಕ ವಾಕಿ ಟಾಕಿಗಳನ್ನು ಬಳಕೆ ಮಾಡಲಾಗುತ್ತಿತ್ತು, ಈಗ ಅದರ ಅಗತ್ಯವಿಲ್ಲ. ರೆಕಾರ್ಡಿಂಗ್ ಸೇರಿದಂತೆ ಯಾವ ವಿಭಾಗದಿಂದ ಯಾವ ಅಧಿಕಾರಿ ಮಾತನಾಡಿದ್ದಾರೆ, ಏನು ಸಂದೇಶ ಕಳಿಸಿದ್ದಾರೆ ಅಂತ ಮತ್ತೊಮ್ಮೆ ಕೇಳಬಹುದು . ನೆಟ್ವರ್ಕ್ ಸಮಸ್ಯೆಯಿಂದ(Network problem) ಈ ಹಿಂದೆ ಕೇವಲ 100 mtr ಗಳವರೆಗೆ ಮಾತ್ರ ಅವಕಾಶವಿತ್ತು. ಈಗ ರಿಪಿಟರ್ಸ್ ವ್ಯವಸ್ಥೆ ಇರೋ ಕಾರಣ ಅದನ್ನು ಮತ್ತೊಂದು ಬಾರಿ ಕೇಳಿ, ಸಂಹವನ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ವೀಕ್ಷಿಸಿ: 'ಚಿನ್ನಾರಿ ಮುತ್ತನ' ಬಾಳಲ್ಲಿ ಬಿರುಗಾಳಿ: ಅಡುಗೆ ಮಾಡೋದ್ರಲ್ಲಿ ಎಕ್ಸ್‌ಪರ್ಟ್‌ ಸ್ಪಂದನಾ !

Video Top Stories