Farmers Suicide: ಸರ್ಕಾರದ ರೂಲ್ಸ್‌ಗಳೇ ರೈತರಿಗೆ ಮಾರಕ
* ಅಕಾಲಿಕ ಮಳೆಯಿಂದ ರಾಯಚೂರು ಜಿಲ್ಲೆಯಾದ್ಯಂತ ನೂರಾರು ಎಕರೆ ಬೆಳೆನಾಶ
* ಒಂದೇ ವಾರದಲ್ಲಿ ಮೂವರು ರೈತರು ಆತ್ಮಹತ್ಯೆ
* ಬ್ಯಾಂಕ್ ನೋಟಿಸ್ ನೀಡಿದ್ದು ಇದ್ರೆ ಮಾತ್ರ ರೈತ ಆತ್ಮಹತ್ಯೆ
ರಾಯಚೂರು(ಡಿ.01): ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೆಲವು ನಿಯಮಗಳು ರೈತರಿಗೆ ಮಾರಕವಾಗಿ ಮಾರ್ಪಟ್ಟಿವೆ. ಇದರಿಂದ ಸಾಲಬಾಧೆಯಿಂದ ಮೃತಪಟ್ಟ ರೈತ ಕುಟುಂಬಗಳಿಗೆ ಪರಿಹಾರ ಸಿಗುತ್ತಿಲ್ಲ. ಖಾಸಗಿಯಾಗಿ ಸಾಲ ತೆಗೆದುಕೊಂಡವರಿಗೆ ಸರ್ಕಾರದ ಕೆಲವು ರೂಲ್ಸ್‌ಗಳು ಮಾರಕವಾಗಿ ಪರಿಣಮಿಸಿವೆ. ಅಕಾಲಿಕ ಮಳೆಯಿಂದ ರಾಯಚೂರು ಜಿಲ್ಲೆಯಾದ್ಯಂತ ನೂರಾರು ಎಕರೆ ಬೆಳೆನಾಶವಾಗಿದೆ. ಇದರಿಂದ ಮನೊಂದ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Chalukya Utsava: ಬಾಗಲಕೋಟೆಯಲ್ಲಿ ಮತ್ತೆ ಶುರುವಾಯ್ತು ಚಾಲುಕ್ಯ, ರನ್ನ ಉತ್ಸವದ ಕೂಗು
ಮೂರು ರೈತ ಆತ್ಮಹತ್ಯೆಯೂ ರೈತ ಆತ್ಮಹತ್ಯೆಯೇ ಅಲ್ಲ ಅಂತ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಕಾಲಿಕ ಮಳೆ, ಬೆಳೆ ಹಾನಿಯಿಂದ ರೈತರು ಮೃತಪಟ್ಟಿದ್ದಾರೆ. ಇವು ಆತ್ಮಹತ್ಯೆ ಅಲ್ಲ ಅಂತ ಹೇಳಿದ್ದಾರೆ. ಬ್ಯಾಂಕ್ ನೋಟಿಸ್ ನೀಡಿದ್ದು ಇದ್ರೆ ಮಾತ್ರ ರೈತ ಆತ್ಮಹತ್ಯೆ ಎಂದು ಪರಿಗಣಿಸಲಾಗುವುದು ಅಂತ ಡಿಸಿ ಸ್ಪಷ್ಟಡಿಸಿದ್ದಾರೆ. ಹೀಗಾಗಿ ಸರ್ಕಾರದ ಕೆಲವು ರೂಲ್ಸ್‌ಗಳು ಆತ್ಮಹತ್ಯೆಗೆ ಶರಣಾದ ಕುಟುಂಬಗಳು ಸಂಕಷ್ಟಗಳನ್ನ ಎದುರಿಸುತ್ತಿವೆ.