ಕಾರವಾರ: ಬೋರ್‌ವೆಲ್‌ ಕೊರೆತದಲ್ಲಿ ಭ್ರಷ್ಟಾಚಾರದ ವಾಸನೆ?

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಯೋಜನೆಗೆ ಬೋರ್‌ವೆಲ್‌| ಅಗತ್ಯವಿದ್ಯಡೆ ಬೋರ್‌ವೆಲ್‌ಗಳನ್ನು ಕೊರೆಸುತ್ತಿರುವ ಆಡಳಿತ| ಕೊರೆದ ಬೋರ್‌ವೆಲ್‌ಗಳಲ್ಲಿ ಹೆಚ್ಚಿನವು ವಿಫಲ, ನೀಲು ಸಿಕ್ಕಿಲ್ಲ| 2014 ರಿಂದ ಈವರೆಗೆ  129 ಬೋರ್‌ವೆಲ್‌ಗಳು ವಿಫಲ| 

First Published Mar 13, 2021, 3:43 PM IST | Last Updated Mar 13, 2021, 3:43 PM IST

ಕಾರವಾರ(ಮಾ.13): ಇನ್ನೇನು ಬೇಸಿಗೆಕಾಲ ಕಾಲಿಡೋ ಸಮಯ. ಬಿಸಿಲ ಧಗೆಗೆ ಎಲ್ಲೆಡೆ ನೀರಿಗಾಗಿ ಹಾಹಾಕಾರ ಕೂಡಾ ಕೇಳಿ ಬರುತ್ತವೆ. ಜನರಿಗೆ ಇಂತಹ ಸ್ಥಿತಿ ಒದಗುವುದನ್ನು ತಪ್ಪಿಸಲು ಜಿಲ್ಲಾಡಳಿತ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಮೂಲಕ ಅಗತ್ಯವಿದ್ದೆಡೆ ಬೋರ್‌‌ವೆಲ್‌ಗಳನ್ನು ಕೂಡಾ ಕೊರೆಯಿಸುತ್ತದೆ. ಆದರೆ, ಕೊರೆದ ಬೋರ್‌ವೆಲ್‌ಗಳಲ್ಲಿ ಹೆಚ್ಚಿನವು ವಿಫಲ ಎಂದು ಕಂಡುಬಂದರೆ..? ಈ ವಿಫಲ ಬೋರ್‌ಗಳಿಗೆ ಲಕ್ಷಗಟ್ಟಲೆ ಹಣ ವ್ಯಯ ಮಾಡಿದರೂ ಅದನ್ನು ಅಧಿಕಾರಿಗಳು ನಷ್ಟವಲ್ಲ ಎಂದು ತೋರಿಸಿದರೆ ? ಇಂತಹ ಪ್ರಕರಣಗಳು ಉತ್ತರಕನ್ನಡ ಜಿಲ್ಲೆಯಲ್ಲಿ ಇದೀಗ ಬೆಳಕಿಗೆ ಬಂದಿದ್ದು, ಭ್ರಷ್ಟಾಚಾರದ ವಾಸನೆ ಬಡಿಯಲಾರಂಭಿಸಿದೆ.

BIG 3 Hero : ಓದಿದ್ದು ಪಿಯುಸಿ, ಮಾಡೋದು ಕೃಷಿ, ಫೇಮಸ್ ಆಗಿದ್ದು ಸಂಶೋಧನೆಯಲ್ಲಿ..!