ಯತ್ನಾಳ್ VS ನಿರಾಣಿ.. ಭುಗಿಲೆದ್ದ ಹಳೇ ದ್ವೇಷದ ಕಿಚ್ಚು..! ತಮ್ಮವರ ವಿರುದ್ಧವೇ ಕಬಡ್ಡಿ ಆಡುತ್ತಿದ್ದಾರೆ ಕೇಸರಿ ಕಲಿಗಳು..!
ಅಶೋಕ್ Vs ವಿಶ್ವನಾಥ್ ವಿಪಕ್ಷ ನಾಯಕನ ವಿರುದ್ಧ "ವಿಶ್ವ"ಪ್ರತಾಪ..!
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಾಣಿಸಿಕೊಂಡ್ರು ಬಿಜೆಪಿ ಶಾಸಕರು..!
ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ರೆಬೆಲ್ ಯತ್ನಾಳ್ ಬಂಡಾಯ..!
ಕಾಂಗ್ರೆಸ್‌ಗೆ (Congress) ಕಾಂಗ್ರೆಸ್ಸೇ ಶತ್ರು ಅನ್ನೋ ಮಾತಿದೆ. ಆದ್ರೆ ಇಲ್ಲಿ ಬಿಜೆಪಿಗೆ(BJP) ಬಿಜೆಪಿಯೇ ಶತ್ರು. ಇದು ಕರ್ನಾಟಕ ಕೇಸರಿ ಕೋಟೆಯೊಳಗೆ ನಡೆಯುತ್ತಿರುವ ದಾಯಾದಿ ಕಲಹದ ಅಸಲಿ ಕಹಾನಿ. ಈ ದಾಯಾದಿ ಕಲಹದಲ್ಲಿ ಬಿಜೆಪಿಯವರಿಗೆ ಬಿಜೆಪಿಯವರೇ ಶತ್ರುಗಳು. ರಾಜ್ಯಾಧ್ಯಕ್ಷರ ವಿರುದ್ಧ ಒಂದಷ್ಟು ಮಂದಿ, ವಿಪಕ್ಷ ನಾಯಕನ(Opposition Leader) ವಿರುದ್ಧ ಇನ್ನೊಂದಷ್ಟು ಮಂದಿ. ದಂಡು ಕಟ್ಟಿ ಬಂಡೆದ್ದವರ ಬಂಡಾಯದ ಬೆಂಕಿಯಲ್ಲಿ ಬೇಯುತ್ತಿದೆ ಕೇಸರಿ ಪಡೆ. ಇಷ್ಟೆಲ್ಲಾ ನಡೀತಾ ಇರೋದು ಶಿಸ್ತಿನ ಪಕ್ಷ ಅಂತ ಕರೆಸಿಕೊಳ್ಳೋ ಬಿಜೆಪಿಯಲ್ಲಿ. ಇಲ್ಲಿ ಬಿಜೆಪಿಗೆ ಬಿಜೆಪಿಯವ್ರೇ ಶತ್ರುಗಳು. ಇಲ್ಲಿ ಒಬ್ಬರ ವಿರುದ್ಧ ಇನ್ನೊಬ್ರು ಕತ್ತಿ ಮಸೆಯುತ್ತಿದ್ದಾರೆ, ಸಿಡಿಲಿನಂತೆ ಸಿಡಿಯುತ್ತಿದ್ದಾರೆ, ಗುಡುಗಿನಂತೆ ಅಬ್ಬರಿಸ್ತಾ ಇದ್ದಾರೆ. ದಾಯಾದಿ ಕಲಹ ಹೇಗಿರತ್ತೆ ಅನ್ನೋದಕ್ಕೆ ಲೇಟೆಸ್ಟ್ ಎಕ್ಸಾಂಪಲ್, ಕರ್ನಾಟಕ ಕೇಸರಿ ಪಾಳೆಯದಲ್ಲಿ ಈಗ ನಡೀತಾ ಇರೋ ಸಂಘರ್ಷ. ಬಿಜೆಪಿಯನ್ನು ಶಿಸ್ತಿನ ಪಕ್ಷ ಅಂತ ಕರೀತಾರೆ. ಕಾರ್ಯಕರ್ತರಿಂದ ಹಿಡಿದು ನಾಯಕರವರೆಗೆ ಪ್ರತೀ ಕ್ಷಣ ಶಿಸ್ತಿನ ಮಂತ್ರ ಜಪಿಸೋ ಪಕ್ಷ ಅದು. ಅಂಥಾ ಪಕ್ಷಕ್ಕೀಗ ರಾಷ್ಟ್ರಮಟ್ಟದಲ್ಲಿ ಮೋದಿ-ಅಮಿತ್ ಶಾ ಜೋಡಿಯ ಬಲಿಷ್ಠ ನಾಯಕತ್ವವಿದೆ. ಈ ಜೋಡಿ ರಾಜ್ಯಗಳ ಮೇಲೆ ರಾಜ್ಯಗಳನ್ನು ಗೆದ್ದು, ಮತ್ತೊಮ್ಮೆ ದೇಶ ಗೆಲ್ಲಲು ಭದ್ರ ಅಡಿಪಾಯವನ್ನೂ ಹಾಕಿದೆ. ಅಲ್ಲಿ ಮೋದಿ-ಅಮಿತ್ ಶಾ ಒಗ್ಗಟ್ಟೇ ನಮ್ಮ ಯಶಸ್ಸಿನ ಮಂತ್ರ ಅಂತಿದ್ರೆ, ಇಲ್ಲಿ ಕರ್ನಾಟಕದಲ್ಲಿ(Karnataka) ಬಿಜೆಪಿ ನಾಯಕರು ದಾಯಾದಿಗಳಂತೆ ಕಚ್ಚಾಡಿಕೊಳ್ತಿದ್ದಾರೆ. ಇಲ್ಲಿ ಒಬ್ಬರನ್ನು ಕಂಡ್ರೆ, ಒಬ್ರಿಗೆ ಆಗಲ್ಲ. ಒಬ್ರಿಗೆ ಸ್ಥಾನಮಾನ ಸಿಕ್ಕಿದ್ರೆ, ಇನ್ನೊಬ್ರಿಗೆ ಇನ್ನೆಲ್ಲೋ ಉರಿ. ಆ ಉರಿ ಹೇಗಿದೆ..? ಅದ್ರಿಂದ ಎದ್ದಿರೋ ಅಸಮಾಧಾನದ ಜ್ವಾಲಾಮುಖಿ ಎಂಥದ್ದು..? ಆ ಅಗ್ನಿಕುಂಡದಲ್ಲಿ ಬಿಜೆಪಿ ಅದ್ಹೇಗೆಲ್ಲಾ ಬೇಯ್ತಾ ಇದೆ ಅನ್ನೋದನ್ನು ಇಂಚಿಂಚಾಗಿ ತೋರಿಸ್ತೀವಿ ವೀಕ್ಷಕರೇ.. ಆದ್ರೆ ಅದಕ್ಕೂ ಮುಂಚೆ ನೂತನ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಇದೊಂದು ಮಾತನ್ನು ನೀವು ಕೇಳಲೇಬೇಕು.
ಇದನ್ನೂ ವೀಕ್ಷಿಸಿ: ಹಮಾಸ್ ವಿರುದ್ಧ ಜಲಯುದ್ಧ ಘೋಷಿಸಿದೆ ಇಸ್ರೇಲ್..! ಗಾಜಾ ಪಟ್ಟಿ ಉಗ್ರರ ಸರ್ವನಾಶಕ್ಕೆ ಕೌಂಟ್ ಡೌನ್ ಶುರು!