ಹಮಾಸ್ ವಿರುದ್ಧ ಜಲಯುದ್ಧ ಘೋಷಿಸಿದೆ ಇಸ್ರೇಲ್..! ಗಾಜಾ ಪಟ್ಟಿ ಉಗ್ರರ ಸರ್ವನಾಶಕ್ಕೆ ಕೌಂಟ್ ಡೌನ್ ಶುರು!

ಹಮಾಸ್ ಸರ್ಪನಾಶಕ್ಕೆ ಇಸ್ರೇಲ್ ವಿಚಿತ್ರ ಸಮರ!
ಉಗ್ರ ಸುರಂಗಕ್ಕೆ ನುಗ್ಗಿ ಬಂತು ಸಮುದ್ರದ ನೀರು!
ಚಿತ್ರವಿಚಿತ್ರ ರಣನೀತಿಯ ಹಿಂದೆ ನಿಗೂಢ ಮರ್ಮ!
 

First Published Dec 16, 2023, 2:46 PM IST | Last Updated Dec 16, 2023, 2:46 PM IST

ಹಮಾಸ್ ನಾಶಕ್ಕೆ  ನುಗ್ಗಿಬಂತು ಇಸ್ರೇಲ್ ಸೃಷ್ಟಿಸಿದ ಮಹಾಪ್ರವಾಹ. ಉಗ್ರ ಸರ್ಪಗಳ ಹುತ್ತದಲ್ಲಿ ಕೋಲಾಹಲ ಸೃಷ್ಟಿಸಿದೆ ಸಮುದ್ರದ ನೀರು. ಹಮಾಸ್(Hamas) ವಿರುದ್ಧ ಅತಿ ವಿಚಿತ್ರ ಜಲಯುದ್ಧ ಘೋಷಿಸಿದೆ ಇಸ್ರೇಲ್. ಬರೋಬ್ಬರಿ 69 ದಿನಗಳೇ ಉರುಳಿ ಹೋಗಿವೆ, ಹಮಾಸ್ ಇಸ್ರೇಲಿನ(Israel ) ಮೇಲೆ ದಾಳಿ ನಡೆಸಿ. ಆದ್ರೆ, ಆ ದಾಳಿಗೆ ಇಸ್ರೇಲ್ ಮಾಡ್ತಾ ಇರೋ ಪ್ರತಿದಾಳಿ ಮಾತ್ರ ಈ ಕ್ಷಣಕ್ಕೂ ನಡೀತಿದೆ. ಹಮಾಸ್ ಉಗ್ರರ ಬಲಿ ಪಡೀತಿದೆ. ಯುದ್ಧ ನಡೀತಿರೋದು ಗಾಜಾ ಪಟ್ಟಿಯ ಮೇಲೆ. ಆ ಯುದ್ಧ ಮಾಡ್ತಾ ಇರೋದು, ಇಸ್ರೇಲ್. ಆದ್ರೆ ಬೆಂಕಿ ಬಿದ್ದಿರೋದು ಮಾತ್ರ, ಈ ಎರಡು ಪ್ರದೇಶಗಳಿಗೆ ಮಾತ್ರವೇ ಅಲ್ಲ. ಹಮಾಸ್ ಮತ್ತು ಇಸ್ರೇಲ್  ಮಧ್ಯೆ ಹೊತ್ತಿರೋ ಬೆಂಕಿ, ತನ್ನ ಕೆನ್ನಾಲಿಗೆನಾ ಮಧ್ಯಪ್ರಾಚ್ಯದ ತುಂಬಾ ಹರಡಿದೆ. ಮಿಡಲ್ ಈಸ್ಟ್ ಒಂದರ್ಥದಲ್ಲಿ ಹೊತ್ತಿ ಉರಿಯುತ್ತಿದೆ. ಹಮಾಸ್ ದಾಳಿಗೆ ಇಸ್ರೇಲ್ ನಡೆಸ್ತಾ ಇರೋ ಪ್ರತಿದಾಳಿ, ಈಗ ತೀವ್ರವಾಗ್ತಾ ಇದೆ. ಎರಡೂ ಕಡೆಯಲ್ಲೂ  ಸಾವು  ನೋವಿನ ನರಳಾಟ, ಆಕ್ರಂದನ ಮಾರ್ದನಿಸ್ತಾ ಇದೆ. ಇಷ್ಟಾದರೂ ಇಸ್ರೇಲ್ ಸೇನೆ ಸುಮ್ಮನಾಗಿಲ್ಲ. ತನ್ನ ಮನೆಗೆ ನುಗ್ಗಿ, ತನ್ನ ಜನರನ್ನೇ ಕೊಂದ ಹಮಾಸ್‌ನ ಸಂಪೂರ್ಣ ನಾಶಗೊಳಿಸೋಕೆ ಪಣತೊಟ್ಟಿದೆ ಇಸ್ರೇಲ್. ಹಾಗಾಗಿನೇ ಮತ್ತೆ ಮತ್ತೆ ದಾಳಿ ನಡೆಸ್ತಲೇ ಇದೆ. ಉಗ್ರ ನೆಲೆಗಳ ಧ್ವಂಸ ಮಾಡ್ತಲೇ ಇದೆ. ಇಸ್ರೇಲ್ ಹಮಾಸ್ ಉಗ್ರರನ್ನ ಹೇಗೆ ಕಾಡ್ತಾ ಇದೆ ಅಂದ್ರೆ, ಉಗ್ರರು ಅಡಗಿಕೊಳ್ಳೋಕೆ ಒಂದು ಭದ್ರ ನೆಲೆಯೂ ಕೂಡ ಇಲ್ಲವಾಗಿದೆ.. ಅಷ್ಟೇ ಅಲ್ಲ, ಇಲ್ಲೀ ತನಕ ಹಮಾಸ್ ಉಗ್ರರ ಬಾಹುಬಲವಾಗಿದ್ದ, ಅವರ ಜೀವ ರಕ್ಷಕವಾಗಿದ್ದ ಟನಲ್ಗಳ ಮೇಲೇ ಈಗ ಇಸ್ರೇಲ್ ದಾಂಗುಡಿ ಇಟ್ಟಿದೆ.. ಉಗ್ರಸರ್ಪಗಳ ಹುತ್ತನ್ನೇ ಸತ್ಯನಾಶ ಮಾಡೋಕೆ ಮುಂದಾಗಿದೆ.

ಇದನ್ನೂ ವೀಕ್ಷಿಸಿ:  ಮಹದೇವಯ್ಯ ಕೊಲೆಯ ರಹಸ್ಯ ಬಯಲು..! ಆಳಾಗಿದ್ದವನೇ ಅರಸನ ಕತ್ತು ಕೊಯ್ದುಬಿಟ್ಟಿದ್ದ..?

Video Top Stories