ರಾಯಚೂರು: 'ಬನ್ನಿ ನೀರು ಕುಡಿಯಿರಿ' ಅಧಿಕಾರಿಗಳಿಗೆ BIG 3 ಬಿಗ್‌ ಚ್ಯಾಲೆಂಜ್..!

*   ಸಮರ್ಪಕ ನೀರು ಪೂರೈಕೆ ಮಾಡದ ರಾಯಚೂರು ನಗರಸಭೆ 
*  ವಾಟರ್‌ ಟ್ಯಾಂಕ್‌ ಸ್ವಚ್ಛಗೊಳಿಸಿ 15 ವರ್ಷಗಳೇ ಆಗಿದೆಯಂತೆ
*  ಜನರ ಜೀವದ ಜತೆ ನಗರಸಭೆ ಅಧಿಕಾರಿಗಳು ಚೆಲ್ಲಾಟ

First Published Jun 7, 2022, 3:24 PM IST | Last Updated Jun 7, 2022, 3:24 PM IST

ರಾಯಚೂರು(ಜೂ.07): ಕಲುಷಿತ ನೀರು ಸೇವಿಸಿ ಜನರು ಆಸ್ಪತ್ರೆ ದಾಖಲಾಗುತ್ತಿದ್ದರೂ ಕೂಡ ರಾಯಚೂರು ನಗರಸಭೆ ಮಾತ್ರ ಇದಕ್ಕೂ ನಮಗೂ ಸಂಬಂಭವಿಲ್ಲವೇನೋ ಎಂಬಂತೆ ವರ್ತಿಸುತ್ತಿದೆ. ಸಮರ್ಪಕವಾಗಿ ನೀರು ಪೂರೈಕೆ ಮಾಡದೇ ಜನರ ಜೀವದ ಜತೆ ನಗರಸಭೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಎರಡು ದಿನಕ್ಕೊಮ್ಮೆ ಬರುವ ನೀರು ಕಲುಷಿತಗೊಂಡಿದೆ. ಇನ್ನು ಎಷ್ಟು ದಿನ ಹೀಗೆ ನರಳಾಡಬೇಕು ಸ್ವಾಮಿ?. ನಗರದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸದ ನಗರಸಭೆಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ವಾಟರ್‌ ಟ್ಯಾಂಕ್‌ ಸ್ವಚ್ಛಗೊಳಿಸಿ 15 ವರ್ಷಗಳೇ ಆಗಿದೆಯಂತೆ. 

BIG 3: ಕುಡಿಯಲು 'ಬಣ್ಣ ಬಣ್ಣದ' ನೀರು, ಜೊತೆಯಲ್ಲಿ ಹುಳು-ಹುಪ್ಪಟೆ ಕಾರುಬಾರು!