ಬಳ್ಳಾರಿಯಲ್ಲಿ ಕೊರೋನಾ ಮರಣ ಮೃದಂಗ: 24 ಗಂಟೆಯಲ್ಲಿ 12 ಮಂದಿ ಬಲಿ
ಕೊರೋನಾ ಸಾವಿನ ಗಡಿ ಮೀರುತ್ತಿದೆ ಬಳ್ಳಾರಿ| ಕಳೆದ 24 ಗಂಟೆಯಲ್ಲಿ 12 ಮಂದಿ ಸಾವು| ಬಳ್ಳಾರಿ ಮುಂದೆ ಬೆಂಗಳೂರು ಕೂಡ ಏನೇನು ಅಲ್ಲ| ಕೋವಿಡ್ ಆಸ್ಪತ್ರೆಯಲ್ಲಿ ನಾಲ್ಕು, ಬಿಮ್ಸ್ ಆಸ್ಪತ್ರೆಯಲ್ಲಿ ನಾಲ್ಕು ರೋಗಿಗಳ ಸಾವು|
ಬಳ್ಳಾರಿ(ಜೂ.29): ಕಳೆದ 24 ಗಂಟೆಯಲ್ಲಿ 12 ಮಂದಿ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಇದರ ಮುಂದೆ ಬೆಂಗಳೂರು ಕೂಡ ಏನೇನು ಅಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೌದು, ನಿನ್ನೆ(ಭಾನುವಾರ) ಇಂದು(ಸೋಮವಾರ) 8 ಮಂದಿ ಮಹಾಮಾರಿ ಕೊರೋನಾಗೆ ಜೀವತೆತ್ತಿದ್ದಾರೆ.
ಬೆಂಗಳೂರು ಇನ್ ಡೇಂಜರ್..ಡೇಂಜರ್..! 5 ದಿನಗಳಲ್ಲಿ ಕೋವಿಡ್ ಕೇಸ್‌ಗಳು ದ್ವಿಗುಣ
ಕೋವಿಡ್ ಆಸ್ಪತ್ರೆಯಲ್ಲಿ ನಾಲ್ಕು, ಬಿಮ್ಸ್ ಆಸ್ಪತ್ರೆಯಲ್ಲಿ ನಾಲ್ಕು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಇಂದಿ ಹೆಲ್ತ್ ಬುಲೆಟಿನ್ ಘೋಷಣೆಯಾಗಿದೆ. ಹೀಗಾಗಿ ಜಿಲ್ಲಾದ್ಯಂತ ಜನರು ಭಯದಲ್ಲೇ ಜೀವನ ಸಾಗಿಸುವಂತ ಪರಿಸ್ಥಿತಿ ಎದುರಾಗಿದೆ.