Asianet Suvarna News Asianet Suvarna News

ಅತಿಥಿ ಗೃಹದ ಸಾಮಾಗ್ರಿ ತೆಗೆದು ಕೊಂಡು ಹೋದ ರೋಹಿಣಿ ಸಿಂಧೂರಿ: ಅಧಿಕಾರಿಗಳಿಂದ ಪತ್ರ

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದ್ದು, ಅತಿಥಿ ಗೃಹದಿಂದ 12 ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು  ಪತ್ರ ಬರೆಯಲಾಗಿದೆ.
 

ಮೈಸೂರು: ಮತ್ತೊಂದು ವಿವಾದದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಿಲುಕಿದ್ದು, ಮೈಸೂರನ್ನು ಬಿಟ್ರೂ ಅವರನ್ನು ವಿವಾದಗಳು ಬಿಡುತ್ತಿಲ್ಲ. ರೋಹಿಣಿ ಉಳಿದಿದ್ದ ಅತಿಥಿ ಗೃಹದಲ್ಲಿನ ಸಾಮಾಗ್ರಿಗಳು ಮಾಯವಾಗಿದ್ದು, ಬಳಕೆಗೆ ಕೊಟ್ಟಿದ್ದ ಮಂಚದ ಸಮೇತ ಹಾಸಿಗೆ ಹಾಗೂ ದಿಂಬು ಸಹಿತ ತೆಗೆದುಕೊಂಡು ಹೋಗಲಾಗಿದೆ. ಅತಿಥಿ ಗೃಹದ ಸಾಮಾಗ್ರಿಗಳನ್ನು ವಾಪಸ್‌ ಕೇಳಿ 2020ರಿಂದ ಮೂರು ಪತ್ರಗಳನ್ನು ಆಡಳಿತ ತರಬೇತಿ ಸಂಸ್ಥೆಯ ಅಧಿಕಾರಿಗಳು ಬರೆದಿದ್ದಾರೆ‌. ಆದರೆ ಅವರು ಅಧಿಕಾರಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.