Asianet Suvarna News Asianet Suvarna News

ಸ್ವಾಮೀಜಿಯನ್ನು ಪರಮಾತ್ಮ ಎಂದು ಘೋಷಿಸಲು ಕೋರಿದ್ದ ಅರ್ಜಿ ವಜಾ

ಶ್ರೀ ಶ್ರೀ ಠಾಕೂರ್‌ ಅಂಕುಲ್‌ ಚಂದ್ರ ಎಂಬುವರನ್ನು ಪರಮಹಂಸ ಎಂದು ಘೋಷಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್, ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದೆ

Petition seeking declaration of Swamiji as Paramatma dismissed akb
Author
First Published Dec 6, 2022, 10:15 AM IST

ನವದೆಹಲಿ: ಶ್ರೀ ಶ್ರೀ ಠಾಕೂರ್‌ ಅಂಕುಲ್‌ ಚಂದ್ರ ಎಂಬುವರನ್ನು ಪರಮಹಂಸ ಎಂದು ಘೋಷಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್, ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದೆ. 1888ರಲ್ಲಿ ಬಾಂಗ್ಲಾದೇಶದ ಪಬ್ನಾದಲ್ಲಿ ಜನಿಸಿದ್ದ ಧರ್ಮಗುರು ಚಂದ್ರ ಅವರನ್ನು ಪರಮಹಂಸ ಎಂದು ಘೋಷಿಸಬೇಕು. ಏಕೆಂದರೆ ಎಂದು ವಕೀಲ ಉಪೇಂದ್ರನಾಥ್‌ ದಲೈ ಅವರು ಹೇಳಲು ಆರಂಭಿಸುತ್ತಿದ್ದಂತೆ ಅರ್ಜಿದಾರರ ವಿರುದ್ಧ ಕಿಡಿಕಾರಿದ ನ್ಯಾ.ಎಂ.ಆರ್‌.ಶಾ ಮತ್ತು ನ್ಯಾ.ಸಿ.ಟಿ.ರವಿಕುಮಾರ್‌, ಇಲ್ಲಿ ಕೇಳಿಸಿಕೊಳ್ಳಿ, ನಿಮ್ಮ ಭಾಷಣ ಕೇಳಲು ನಾವಿಲ್ಲಿ ಕುಳಿತಿಲ್ಲ. ಯಾರಿಗೆ ಅವರು ಭಗವಂತ ಎಂದು ಅನ್ನಿಸುತ್ತದೆಯೋ ಅವರು ಅಂದುಕೊಳ್ಳಲಿ, ಪ್ರತಿಯೊಬ್ಬರಿಗೂ ಅವರ ಧರ್ಮ, ದೇವರನ್ನು ಪೂಜಿಸುವ ಹಕ್ಕಿದೆ. ಆದರೆ ಇನ್ನೊಬ್ಬರೂ ಅದನ್ನು ಪಾಲನೆ ಮಾಡುವಂತೆ ಹೇರುವ ಹಕ್ಕು ಯಾರಿಗೂ ಇಲ್ಲ. ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿದಾರರಿಗೆ 1 ಲಕ್ಷ ರು. ದಂಡ ವಿಧಿಸಿ ಅರ್ಜಿಯನ್ನು ವಜಾ ಮಾಡಿತು.

Davanagere: ಶ್ರೀ ಭಗವದ್ಗೀತೆ ಜ್ಞಾನದ ಗಂಗೆಯಾಗಿದೆ : ರಾಜ್ಯಪಾಲ ಗೆಹ್ಲೋಟ್ ಅಭಿಮತ

ಮತಾಂತರಗೊಂಡರೆ ಜಾತಿ ಆಧಾರಿತ ಮೀಸಲಾತಿ, ಸೌಲಭ್ಯ ಕಟ್, ಹೈಕೋರ್ಟ್ ಮಹತ್ವದ ಆದೇಶ!

Follow Us:
Download App:
  • android
  • ios