Asianet Suvarna News Asianet Suvarna News

ಬೆಂಗಳೂರು: ಸಿಗ್ನಲ್‌ಗಳಲ್ಲಿ ಬೇಕಾಬಿಟ್ಟಿ ಓಡಾಟ, ಎರಡೇ ತಿಂಗಳಲ್ಲಿ 72 ಲಕ್ಷ ಕೇಸ್‌ ದಾಖಲು..!

ಸದ್ಯ ಬೆಂಗಳೂರಿನಾದ್ಯಂತ ಟ್ರಾಫಿಕ್‌ ಪೊಲೀಸರು ವಾಹನ ತಪಾಸಣೆ ಮಾಡೋದನ್ನ ನಿಲ್ಲಿಸಿದ್ದೇವೆ. ಕಳೆದ ಎರಡು ತಿಂಗಳಲ್ಲಿ ಬರೋಬ್ಬರಿ 72 ಲಕ್ಷ ರೂಲ್ಸ್‌ ಬ್ರೇಕ್‌ ಕೇಸ್‌ಗಳು ಆನ್‌ಲೈನ್‌ನಲ್ಲಿ ನೋಂದಣಿಯಾಗಿವೆ: ಸ್ಪೆಶಲ್ ಕಮಿಷನರ್‌ ಸಲೀಂ ಅಹ್ಮದ್‌ 

First Published Apr 20, 2023, 11:30 PM IST | Last Updated Apr 20, 2023, 11:30 PM IST

ಬೆಂಗಳೂರು(ಏ.20): ವಾಹನ ತಪಾಸಣೆ ಮಾಡುತ್ತಿಲ್ಲ ಅಂತ ರೂಲ್ಸ್‌ ಬ್ರೇಕ್‌ ಮಾಡುವವರಿಗೆ ಟ್ರಾಫಿಕ್‌ ಪೊಲೀಸರು ಶಾಕ್‌ ಕೊಟ್ಟಿದ್ದಾರೆ. ಹೌದು, ಸಿಗ್ನಲ್‌ಗಳಲ್ಲಿ ಬೇಕಾಬಿಟ್ಟಿ ಓಡಾಡುವವರಿಗೆ ಡಿಜಿಟಲ್‌ ಮೂಲಕ ಫೈನ್‌ ಹಾಕುತ್ತಿದ್ದಾರೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ಪೆಶಲ್ ಕಮಿಷನರ್‌ ಸಲೀಂ ಅಹ್ಮದ್‌ ಅವರು, ಸದ್ಯ ಬೆಂಗಳೂರಿನಾದ್ಯಂತ ಟ್ರಾಫಿಕ್‌ ಪೊಲೀಸರು ವಾಹನ ತಪಾಸಣೆ ಮಾಡೋದನ್ನ ನಿಲ್ಲಿಸಿದ್ದೇವೆ. ಕಳೆದ ಎರಡು ತಿಂಗಳಲ್ಲಿ ಬರೋಬ್ಬರಿ 72 ಲಕ್ಷ ರೂಲ್ಸ್‌ ಬ್ರೇಕ್‌ ಕೇಸ್‌ಗಳು ಆನ್‌ಲೈನ್‌ನಲ್ಲಿ ನೋಂದಣಿಯಾಗಿವೆ ಅಂತ ಮಾಹಿತಿ ನೀಡಿದ್ದಾರೆ.

ನನ್ನದು ದುರಹಂಕಾರ ಅಲ್ಲ, ಸ್ವಾಭಿಮಾನ: ಎಚ್‌ಡಿಕೆ ವಿರುದ್ಧ ಸುಮಲತಾ ವಾಗ್ದಾಳಿ