Asianet Suvarna News Asianet Suvarna News

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚಹಲ್ ಭಾವಿ ಪತ್ನಿ ಡ್ಯಾನ್ಸ್..!

ಮರಳುಗಾಡಿನಲ್ಲಿ ಚುಟುಕು ಕ್ರಿಕೆಟ್‌ನಲ್ಲಿ ವಿಕೆಟ್ ಕಬಳಿಸಲು ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಬೆವರು ಹರಿಸುತ್ತಿದ್ದರೆ, ಭಾವಿ ಪತ್ನಿ ಧನಶ್ರೀ ವರ್ಮಾ ಸಿಕ್ಕಾಪಟ್ಟೆ ಸ್ಟೆಪ್ ಹಾಕಿರುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ.

ಬೆಂಗಳೂರು(ಸೆ.15): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಭಾಂಧವ ಬೌಲರ್ ಯುಜುವೇಂದ್ರ ಚಹಲ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದುಬೈ ಫ್ಲೈಟ್‌ ಹತ್ತುವ ಮುನ್ನವೇ ಚಂದುಳ್ಳಿ ಚಲುವೆ ಧನಶ್ರೀ ವರ್ಮಾ ಜತೆ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಎಲ್ಲರು ಹುಬ್ಬೇರುವಂತೆ ಮಾಡಿದ್ದರು.
  
ಅತ್ತ ಮರಳುಗಾಡಿನಲ್ಲಿ ಚುಟುಕು ಕ್ರಿಕೆಟ್‌ನಲ್ಲಿ ವಿಕೆಟ್ ಕಬಳಿಸಲು ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಬೆವರು ಹರಿಸುತ್ತಿದ್ದರೆ, ಭಾವಿ ಪತ್ನಿ ಧನಶ್ರೀ ವರ್ಮಾ ಸಿಕ್ಕಾಪಟ್ಟೆ ಸ್ಟೆಪ್ ಹಾಕಿರುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ.

IPL 2020: ಕಪ್ ಗೆದ್ದು ಗುರು ಕಾಣಿಕೆ ನೀಡ್ತಾರಾ ಕೆ.ಎಲ್. ರಾಹುಲ್..?

ಡ್ಯಾನ್ಸ್ ಕೊರಿಯೋಗ್ರಾಫರ್ ಹಾಗೂ ಡಾಕ್ಟರ್ ಆಗಿರುವ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೋವೀಗ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಹೇಗಿತ್ತು ಡ್ಯಾನ್ಸ್ ಎನ್ನುವುದನ್ನು ನೀವೇ ನೋಡಿ.

Video Top Stories