Asianet Suvarna News Asianet Suvarna News
breaking news image

ಮುಂಬೈ ಇಂಡಿಯನ್ಸ್‌- ಕೆಕೆಆರ್ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭ

ಮುಂಬೈ ಇಂಡಿಯನ್ಸ್‌ಗೆ ಯುಎಇ ಎನ್ನುವ ಪೆಡಂಭೂತ ಇನ್ನಿಲ್ಲದಂತೆ ಕಾಣುತ್ತಿದೆ. ಯುಎಇನಲ್ಲಿ ಇದುವರೆಗೂ ಒಟ್ಟು 6 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಚೆನ್ನೈಗೆ ಶರಣಾಗಿತ್ತು.

ಅಬುಧಾಬಿ(ಸೆ.23): ಐಪಿಎಲ್‌ನ ಎರಡು ಬಲಾಢ್ಯ ತಂಡಗಳಾದ ಕೋಲ್ಕತ ನೈಟ್‌ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಇಲ್ಲಿನ ಶೇಖ್ ಝಾಯೆದ್ ಮೈದಾನದಲ್ಲಿ ಮುಖಾಮುಖಿಯಾಗುತ್ತಿದ್ದು, ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. 

ಮುಂಬೈ ಇಂಡಿಯನ್ಸ್‌ಗೆ ಯುಎಇ ಎನ್ನುವ ಪೆಡಂಭೂತ ಇನ್ನಿಲ್ಲದಂತೆ ಕಾಣುತ್ತಿದೆ. ಯುಎಇನಲ್ಲಿ ಇದುವರೆಗೂ ಒಟ್ಟು 6 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಚೆನ್ನೈಗೆ ಶರಣಾಗಿತ್ತು.

ಬಲಿಷ್ಠ ಮುಂಬೈ ಮಣಿಸಿ ಕೆಕೆಆರ್ ಶುಭಾರಂಭ ಮಾಡುತ್ತಾ..?

ಇನ್ನು ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಕೋಲ್ಕತ ನೈಟ್‌ ರೈಡರ್ಸ್‌ ಆಡುತ್ತಿರುವ ಮೊದಲ ಪಂದ್ಯದಲ್ಲೇ ಮುಂಬೈಗೆ ಟಕ್ಕರ್ ನೀಡಿ ಗೆಲುವಿಮ ಖಾತೆ ತೆರೆಯಲು ಎದುರು ನೋಡುತ್ತಿದೆ. ಹೀಗಾಗಿ ಹೈವೋಲ್ಟೇಜ್ ಪಂದ್ಯದಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Video Top Stories