Asianet Suvarna News Asianet Suvarna News

ಬಲಿಷ್ಠ ಮುಂಬೈ ಮಣಿಸಿ ಕೆಕೆಆರ್ ಶುಭಾರಂಭ ಮಾಡುತ್ತಾ..?

ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್ ತಂಡವೇ ಹೆಚ್ಚು ಸಮತೋಲನದಿಂದ ಕೂಡಿದಂತೆ ಕಂಡು ಬಂದಿದ್ದರೂ ಸಹ, ತನ್ನ ಕೆಕೆಆರ್ ತಂಡದಲ್ಲಿರುವ ಕೆಲವು ಟಿ20 ಸ್ಪೆಷಲಿಸ್ಟ್‌ಗಳು ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.

ಅಬುಧಾಬಿ(ಸೆ.23): ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್ ತಂಡಗಳು ಇಂದು ಅಬುಧಾಬಿಯ ಶೇಖ್ ಝಾಯೆದ್ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ. ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್ ತಂಡವೇ ಹೆಚ್ಚು ಸಮತೋಲನದಿಂದ ಕೂಡಿದಂತೆ ಕಂಡು ಬಂದಿದ್ದರೂ ಸಹ, ತನ್ನ ಕೆಕೆಆರ್ ತಂಡದಲ್ಲಿರುವ ಕೆಲವು ಟಿ20 ಸ್ಪೆಷಲಿಸ್ಟ್‌ಗಳು ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.

IPL 2020: RCB ವಿರುದ್ಧ ಸೋಲಿನ ಬೆನ್ನಲ್ಲೇ ಸನ್‌ರೈಸರ್ಸ್‌ಗೆ ಮತ್ತೊಂದು ಶಾಕ್..!

13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಇನ್ನು ಈಗಾಗಲೇ ಉದ್ಘಾಟನಾ ಪಂದ್ಯದಲ್ಲೇ ಮುಖಭಂಗ ಅನುಭವಿಸಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯಲ್ಲಿ ಜಯದ ಖಾತೆ ತೆರೆಯಲು ಎದುರು ನೋಡುತ್ತಿದೆ.

Video Top Stories