Viral Video: ಹಾವಿನಂತೆ ಬುಸುಗುಟ್ಟಿದ ಯುವಕರು: ನಾಗಿಣಿ ಡ್ಯಾನ್ಸ್ ಮಾಡುವಾಗ ಆಗಿದ್ದೇನು?

ನಾಗಿಣಿ ಡ್ಯಾನ್ಸ್ ಮಾಡುವಾಗ ಯುವಕರ ನಡುವೆ ಕಿತ್ತಾಟ ನಡೆದಿದೆ. ನಾಗರ ಹಾವುಗಳಂತೆ ಬುಸುಗುಡುತ್ತಾ ಕಿರಿಕ್ ಮಾಡಿಕೊಂಡಿದ್ದಾರೆ.
 

First Published Dec 19, 2022, 12:17 PM IST | Last Updated Dec 19, 2022, 12:17 PM IST

ಮದುವೆಯಲ್ಲಿ ನಾಗಿಣಿ ಮ್ಯೂಸಿಕ್‌ ಭಾರಿಸುತ್ತಿದ್ದರೆ ಈವೇಳೆ ಯುವಕರಿಬ್ಬರು ಫುಲ್‌ ಜೋಶ್‌'ನಲ್ಲಿ ನಾಗಿಣಿ ಸ್ಟೆಪ್‌ ಹಾಕುತ್ತಿದ್ದರು. ಹೀಗೆ ನಾಗಿಣಿ ಡ್ಯಾನ್ಸ್‌ ಮಾಡುತ್ತಿದ್ದ ಇಬ್ರು ಯುವಕರು, ನೋಡು ನೋಡುತ್ತಾ ಹೊಡೆದಾಡಿಕೊಳ್ಳಲು ಆರಂಭಿಸಿದ್ದು, ಅಲ್ಲಿದ್ದವರು ಒಂದು ಕ್ಷಣ ದಂಗಾಗಿಬಿಟ್ಟಿದ್ದರು. ಒಬ್ಬ ತನ್ನ ಅಂಗೈಯಲ್ಲಿ ಹಾವಿನಂತೆ ಹೆಡೆ ತೆಗೆದು ಎದುರಿದ್ದ ಯುವಕನಿಗೆ ಕುಟುಕಲು ಮುಂದಾಗಿದ್ದ. ಯಾಕೋ ಇದು ಎದುರು ಇದ್ದವನಿಗೆ ಸರಿ ಬರಲಿಲ್ಲ ಅನ್ನಿಸುತ್ತೆ. ಆತನು ಸಹ ಕುಟುಕಲು ಮುಂದಾಗಿದ್ದಾನೆ.  ನಂತರ ಇಬ್ಬರು ಡ್ಯಾನ್ಸ್‌ ಮಾಡುವುದು ಬಿಟ್ಟು, ಹೊಡೆದಾಡಲು ಮುಂದಾದರು. ಇವರಿಬ್ಬರ ಹೊಡೆದಾಟವನ್ನು ನೋಡಿದ ಬ್ಯಾಂಡ್‌ ಬಾಜಾದವರು ತಬ್ಬಿಬ್ಬಾಗಿ ಮ್ಯೂಸಿಕ್‌ ಅನ್ನೇ ನಿಲ್ಲಿಸಿ ಬಿಟ್ಟರು. ಆದ್ರೆ ಅಲ್ಲಿ ಇದ್ದವರು ಇವರ ಜಗಳವನ್ನು ಬಿಡಿಸಲು ಮುಂದಾಗಿದ್ದರು, ಕಾಮಿಡಿಯಲ್ಲಿ ಶುರುವಾದ ವಾರ್‌ ರೊಚ್ಚಿಗೆದ್ದು ಹೊಡೆದಾಡುಕೊಳ್ಳವರೆಗೆ ಹೋಗಿತ್ತು. ಸಧ್ಯ ಈ ವಿಡಿಯೋ ವೈರಲ್ ಆಗುತ್ತಿದೆ.