India Rounds: ಏನಿದು ಲ್ಯಾಂಡ್ ಫಾರ್ ಜಾಬ್ ಹಗರಣ? ಯಾರಿಗೆಲ್ಲಾ ಸಿಬಿಐ ಗಾಳ?
2004-09 ರ ನಡುವೆ ಯುಪಿಎ 1 ಸರ್ಕಾರದ ಅವಧಿಯಲ್ಲಿ ನಡೆದಿದ್ದಂತಹ ಬಹುದೊಡ್ಡ ಹಗರಣ ಈಗ ಎಲ್ಲ ಕಡೆಯೂ ಚರ್ಚೆ ನಡೆಯುತ್ತಿದೆ.
ನವದೆಹಲಿ(ಮಾ.11): ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಯಾದವ್ ಅವರು ಮೇವು ಹಗರಣದ ಪ್ರಮುಖ ರೂವಾರಿ. ಅವರು ಹಗರಣ ಮಾಡಿದ್ದು, ಜೈಲಿಗೆ ಹೋಗಿದ್ದು, ಕಂಬಿಗಳ ಹಿಂದೆ ಕೂತಿರುವ ಎಲ್ಲ ಕಥೆಗಳೂ ಗೊತ್ತಿವೆ. ಆದರೆ, ಅದು ನಡೆದಿದ್ದು ಬಿಹಾರದಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ. ಈಗ ಹೇಳೋಕೆ ಹೊರಟಿರೋದು ಇದೀಗ ಅವರ ಪಾತ್ರ ಬದಲಾಗಿದೆ. ವ್ಯಕ್ತಿ ಅವರೇ. 2004-09 ರ ನಡುವೆ ಯುಪಿಎ 1 ಸರ್ಕಾರದ ಅವಧಿಯಲ್ಲಿ ನಡೆದಿದ್ದಂತಹ ಬಹುದೊಡ್ಡ ಹಗರಣ ಈಗ ಎಲ್ಲ ಕಡೆಯೂ ಚರ್ಚೆ ನಡೆಯುತ್ತಿದೆ. ಆ ಹಗರಣ ನಡೆದಾಗ ಲಾಲೂಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಹಲವರನ್ನ ನೇಮಕಾತಿ ಮಾಡ್ತಾರೆ, ಅದಕ್ಕೆ ಒಂದು ಪಬ್ಲಿಕ್ ನೋಟಿಫಿಕೆಷನ್ ಇಲ್ಲ, ಜಾಹೀರಾತು ಕೊಟ್ಟಿರಲ್ಲ, ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಚಾಲನೆಯಾಗಿರಲ್ಲ. ಇದೆಲ್ಲದರ ಕಂಪ್ಲೀಟ್ ಮಾಹಿತಿ ಇಂದಿನ ವಿಡಿಯೋದಲ್ಲಿದೆ.