ವೋಟರ್ಸ್‌ಗೆ ಫ್ರೀ ಸೈಟ್‌! ಬಿಜೆಪಿ ಆಕಾಂಕ್ಷಿಯಿಂದ ಮತದಾರರಿಗೆ ಆಫರ್‌!

ರೇಷ್ಮೆನಾಡು ರಾಮನಗರ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು 15*20 ಅಳತೆಯ ಉಚಿತ ನಿವೇಶನ ನೀಡುವುದಾಗಿ ತಿಳಿಸಿದ್ದಾರೆ.

First Published Mar 11, 2023, 7:40 PM IST | Last Updated Mar 11, 2023, 7:41 PM IST

ರಾಮನಗರ (ಮಾ.11): ರೇಷ್ಮೆನಾಡು ರಾಮನಗರ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು 15*20 ಅಳತೆಯ ಉಚಿತ ನಿವೇಶನ ನೀಡುವುದಾಗಿ ತಿಳಿಸಿದ್ದಾರೆ.

ಬಿಡದಿಯ ಬಳಿ ಸುಮಾರು 3 ಸಾವಿರ ನಿವೇಶನವನ್ನು ಉಚಿತವಾಗಿ ಹಂಚಿಕೆ ಮಾಡಲಾಗುತ್ತದೆ. ಅಂಗವಿಕಲರು, ಮಹಿಳೆಯರು ಹಾಗೂ ಅನಾಥರಿಗೆ ನಿವೇಶನ ನೀಡುವ ಬಗ್ಗೆ ಚಿಂತನೆ ಮಾಡಲಾಗಿದೆ. ಇನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಉಚಿತವಾಗಿ ಮನೆಯನ್ನು ಕಟ್ಟಿಸಿಕೊಡಲು ಮುಂದಾಗಿದ್ದೇವೆ. ಇನ್ನು ಈಗಾಗಲೇ ನಿವೇಶನ ಹಂಚಿಕೆಗೆ 6 ಎಕರೆ ಜಮೀನನ್ನೂ ಗುರುತಿಸಲಾಗಿದ್ದು, ಅದನ್ನು ವಸತಿ ಪ್ರದೇಶವಾಗಿ ಕನ್ವರ್ಷನ್ ಮಾಡಲು ಅರ್ಜಿ ಹಾಕಲಾಗಿದೆ. ಬಿಜೆಪಿ ಕಾರ್ಯಕರ್ತರಿಂದ ಅರ್ಹ ಫಲಾನುಭವಿಗಳು ಅರ್ಜಿ ಹಾಕುವುದಕ್ಕೆ ಅವಕಾಶ ನೀಡಲಾಗಿದೆ ಎಂದು ರಾಮನಗರ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಪ್ರಸಾದ್‌ ಗೌಡ ತಿಳಿಸಿದ್ದಾರೆ.