ಶಿವಮೊಗ್ಗ, ಬೆಳಗಾವಿಯಲ್ಲಿ ಮೋದಿ ನೋಡಿದ ಜನ ಏನಂದ್ರು? ಕರ್ನಾಟಕದಲ್ಲಿ ಪ್ರಧಾನಿ ಸಂಚಲನ!
ಪ್ರಧಾನಿ ಮೋದಿ ಶಿವಮೊಗ್ಗ ಮತ್ತು ಬೆಳಗಾವಿ ಪ್ರವಾಸ ಅತ್ಯಂತ ವಿಶೇಷವಾಗಿತ್ತು. ಬಿಎಸ್ ಯಡಿಯೂರಪ್ಪ ಹುಟ್ಟಹಬ್ಬ ದಿನ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದರೆ, ಬೆಳಗಾವಿಯಲ್ಲಿ ರೈಲು ನಿಲ್ದಾಣ ಸೇರಿದಂತೆ ಹಲುವ ಯೋಜನೆಗಳ ಉದ್ಘಾಟಿಸಿದರು. ಮೋದಿ ನೋಡಲು ಜನಸಾಗರವೇ ಹರಿದು ಬಂದಿತ್ತು. ಸಮಾವೇಶದಲ್ಲಿ ಮೋದಿ ಭಾಷಣ ವೈರಲ್ ಆಗಿದೆ. ಮೋದಿ ಭೇಟಿಯ ಸಂಪೂರ್ಣ ವಿವರ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಇಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಧಾಟನೆ ಹಾಗೂ ಬೆಳಗಾವಿಯಲ್ಲಿನ ಹಲವು ಕಾರ್ಯಕ್ರಮಗಳ ಉದ್ಘಾಟನೆಗೆ ಕರ್ನಾಟಕ ಪ್ರವಾಸ ಮಾಡಿದ್ದರು. ಶಿವಮೊಗ್ಗ ಹಾಗೂ ಬೆಳಗಾವಿಯಲ್ಲಿ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಮೋದಿ ಮೋದಿ ಜಯಘೋಷ, ಹೂಮಳೆ ಸ್ವಾಗತ ಸೇರಿದಂತೆ ಹಲವು ಕಣ್ಮನ ಸೆಳೆಯವು ಘಟನೆಗಳು ನಡೆದವು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಶುಭಕೋರಿದ ಮೋದಿ, ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದರು. ಮೋದಿ ಪ್ರಧಾನಿಯಾಗು ವೇಳೆ ದೇಶದಲ್ಲಿ 74 ವಿಮಾನ ನಿಲ್ದಾಣಗಳಿತ್ತು. ಇದೀಗ ಕಳೆದ 9 ವರ್ಷದಲ್ಲಿ ಬಿಜೆಪಿ ಸರ್ಕಾರ 74 ವಿಮಾ ನಿಲ್ದಾಣ ಮಾಡಿದೆ.ಇದೀಗ ಕರ್ನಾಟಕದಲ್ಲಿ ಒಟ್ಟು 10 ವಿಮಾನ ನಿಲ್ದಾಣ ಹೊಂದಿದ ದೇಶದ 3ನೇ ರಾಜ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.ಬಳಿಕ ಬೆಳಗಾವಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ 11 ಕಿಲೋಮೀಟರ್ ರೋಡ್ ಶೋ ನಡೆಸಿದ್ದಾರೆ. ರಸ್ತೆ ಇಕ್ಕೆಲಗಳಲ್ಲಿ ಅಭಿಮಾನಿಗಳು ತುಂಬಿ ತುಳುಕಿದ್ದರು. ಹೂಮಳೆಯಿಂದ ಪ್ರಧಾನಿ ಮೋದಿಗೆ ಸ್ವಾಗತ ಕೋರಿದರು. 10 ಸಾವಿರ ಹಣ್ಣುಮಕ್ಕಳು ಪೂರ್ಣಕುಂಭ ಸ್ವಾಗತ ಕೋರಿದರು.ಹಿಂದೆಂದೂ ನೋಡಿದರ ಅದ್ಧೂರಿ ರೋಡ್ ಶೋಗೆ ಬೆಳಗಾವಿ ಸಾಕ್ಷಿಯಾಗಿದೆ. ಬಳಿಕ ಹಲವು ಕಾರ್ಯಕ್ರಮಗಳ ಉದ್ಘಾಟಿಸಿದರು. ಈ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕರ್ನಾಟಕದಲ್ಲಿ ಮೋದಿ ಮೇನಿಯಾ ಹೇಗಿತ್ತು? ಇಲ್ಲಿದೆ ಸಂಪೂರ್ಣ ವಿವರ.