Ayodhya Ram Mandir: ರಾಮಭಕ್ತರ ಸಂಭ್ರಮ ಹೆಚ್ಚಿಸಿದೆ ಕೃಷ್ಣ ಶಿಲೆಯಲ್ಲಿ ಅರಳಿದ ರಾಮನ ವಿಗ್ರಹ..!
500 ವರ್ಷಗಳ ನಂತರ ರಾಮಜನ್ಮಭೂಮಿಯಲ್ಲಿ ಅಸಲಿ ದೀಪಾವಳಿ..!
ಅಯೋಧ್ಯೆಯಲ್ಲಿ ವಿರಾಜಮಾನನಾದ ಮರ್ಯಾದಾ ಪುರುಷೋತ್ತಮ..!
ಭವ್ಯ ಮಂದಿರದಲ್ಲಿ ರಾಮಲಲ್ಲಾನಿಗೆ ನಡೆಯಲಿದೆ ಪ್ರಾಣ ಪ್ರತಿಷ್ಠಾಪನೆ..!
ಭವ್ಯ ಮಂದಿರದ ಪವಿತ್ರ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀರಾಮ. ಸೋಮವಾರ ರಾಮಲಲ್ಲಾನಿಗೆ(Ramlalla idol) ನಡೆಯಲಿದೆ ಪ್ರಾಣ ಪ್ರತಿಷ್ಠೆ. ಜಗತ್ತಿನಾದ್ಯಂತ ಮೇಳೈಸಿದ ರಾಮೋತ್ಸವ, ರಾಮಸಂಭ್ರಮ. ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಶ್ರೀರಾಮನಿಗೆ ಜೈಕಾರ ಹಾಕ್ತಿದ್ದಾರೆ ರಾಮಭಕ್ತರು. ಅಮೆರಿಕದಿಂದ(America) ಅಯೋಧ್ಯೆಗೆ(Ayodhya) ರಾಮನಿಗಾಗಿ ಬಂತು ಒಂದು ಕೆ.ಜಿ ಬಂಗಾರ. ಬ್ರಿಟನ್(Britain) ಸಂಸತ್'ನಲ್ಲೂ ರಾಮಘೋಷ, ಅಮೆರಿಕದ ಬೀದಿಗಳಲ್ಲೂ ರಾಮನಾಮ ಸ್ಮರಣೆ. ಮರ್ಯಾದ ಪುರುಷೋತ್ತಮ ಶ್ರೀರಾಮ ಈ ನೆಲದ ಅಸ್ಮಿತೆ, ಈ ನೆಲದ ಕ್ಷಾತ್ರ. ಅವನಿಲ್ಲದ ಭಾರತವಿಲ್ಲ. ರಾಮನಿಗೊಂದು ಆಲಯಕ್ಕಾಗಿ, ರಾಮಜನ್ಮಭೂಮಿಯಲ್ಲಿ(Ram Janmabhoomi) ರಾಮಮಂದಿರ ನಿರ್ಮಾಣಕ್ಕಾಗಿ ಶತಮಾನಗಳಿಂದ ನೆಲಕ್ಕೆ ಬಿದ್ದ ರಕ್ತಕ್ಕೆ ಲೆಕ್ಕವೇ ಇಲ್ಲ. ಆ ಎಲ್ಲಾ ತ್ಯಾಗ, ಬಲಿದಾನಗಳಿಗೆ ಫಲ ಸಿಗುವ ಕ್ಷಣ ಹತ್ತಿರ ಬಂದೇ ಬಿಟ್ಟಿದೆ. ಜನವರಿ 22 ರಂದು ನಡೆಯುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಪೂರ್ವಭಾವಿ ಕಾರ್ಯಕ್ರಮಗಳು ಆಯೋಧ್ಯೆಯಲ್ಲಿ ನೆರವೇರುತ್ತಿದ್ದು, 51 ಇಂಚು ಎತ್ತರದ ರಾಮ ಲಲ್ಲಾನ ವಿಗ್ರಹವನ್ನು ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ.
ಇದನ್ನೂ ವೀಕ್ಷಿಸಿ: Ram Mandir: ಸಂಘರ್ಷದ ಹೊತ್ತಲ್ಲೂ ನಡೆದಿತ್ತಾ ಸಂಚು? ವೈಜ್ಞಾನಿಕ ವರದಿಗೂ ಎದುರಾಗಿತ್ತು ಟೀಕೆ! ಏಕೆ?!