ಅಮೆರಿಕಾ ವೇದಿಕೆ ಮೇಲೆ ಚೀನಾ ಹೊಗಳಿದ ರಾಗಾ... ರಾಹುಲ್ ಮಾತಿಗೆ ಖಲಿಸ್ತಾನಿ ಪನ್ನು.. ಫುಲ್ ಖುಷ್! ಯಾಕೆ?!
ಆಕೆಯನ್ನ ಭಾರತ ವಿರೋಧಿ ಅಂತಲೇ ಕನ್ಸಿಡರ್ ಮಾಡ್ತಾರೆ.. ಪಿಒಕೆ ವಿಚಾರದಲ್ಲಿ ಆಕೆ ಹೇಳಿದ್ದ ಮಾತುಗಳು, ದೇಶದಲ್ಲೇ ದೊಡ್ಡ ಸಂಚಲನ ಸೃಷ್ಟಿಸಿಬಿಟ್ಟಿತ್ತು.. ಅಂಥಾ ಹೆಣ್ಣಿನ ಜೊತೆ ರಾಹುಲ್ ಗಾಂಧಿ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ.
ರಾಹುಲ್ ಗಾಂಧಿ ಅವರು ಅಮೆರಿಕಾ ಯಾತ್ರೆ ಹೊರಟು ಮೂರು ದಿನಗಳು ಕಳೆದಿವೆ.. ಆದ್ರೆ ಈ ಮೂರೂ ದಿನವೂ ಒಂದಲ್ಲೊಂದು ಕಾಂಟ್ರವರ್ಸಿಗೆ ಕಾರಣವಾಗೋಯ್ತು.. ಬಿಜೆಪಿ ನಾಯಕರಂತೂ ವಿರೋಧ ಪಕ್ಷದ ನಾಯಕರು, ಭಾರತ ವಿರೋಧಿಗಳ ಜೊತೆಗೇ ಹೆಚ್ಚು ಕಾಣಿಸಿಕೊಂಡಿದಾರೆ.. ಅದರ ಹಿಂದೆ ಏನೋ ಸಂಚಿದೆ ಅನ್ನೋ ಅರ್ಥದಲ್ಲೆಲ್ಲಾ ಮಾತಾಡಿಬಿಟ್ರು.. ಆದ್ರೆ ಅಸಲಿಗೆ ಆಗಿದ್ದೇನು? ಅಮೆರಿಕಾದಲ್ಲಿ ನಡೆದಿದ್ದೇನು? ಅದೆಲ್ಲದರ ಇಂಚಿಂಚು ಮಾಹಿತಿ ಇಲ್ಲಿದೆ ನೋಡಿ.