ನಿನ್ನೆ ಕಲೆಗಾರ, ಇಂದು ಕೊಲೆಗಾರ.. ನಾಳೆಯ ದರ್ಶನ್ ಸಮಾಚಾರ ಏನು?: ನಟ ರಮೇಶ್ ಅರವಿಂದ್

ದರ್ಶನ್ ವಿಚಾರ ಒಂದು ರೀತಿ ಕನ್ನಡ ಸಿನಿಕಲಾವಿದರ ಪಾಲಿಗೆ ಬಿಸಿ ತುಪ್ಪ. ಆ ಕಡೆ ನುಂಗಂಗು ಇಲ್ಲ ಈ ಕಡೆ ಉಗುಳಂಗೂ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಒಂದೇ ಒಂದು ಕಾಂಟ್ರವರ್ಸಿ ಮಾಡಿಕೊಳ್ಳದೇ, ಎಲ್ಲರ ಸ್ನೇಹವನ್ನೂ ಸಂಪಾದಿಸಿರೋ ಅಜಾತಶತ್ರು ರಮೇಶ್ ಅರವಿಂದ್.

First Published Sep 12, 2024, 4:13 PM IST | Last Updated Sep 12, 2024, 4:14 PM IST

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಸೇರಿರೋದು ಸ್ಯಾಂಡಲ್ ವುಡ್ ತಾರೆಯರಿಗೆ ಒಂದು ರೀತಿ ಮುಜುಗರ ತಂದಿರೋದು ಸುಳ್ಳಲ್ಲ. ದರ್ಶನ್ ಬಗ್ಗೆ ಮಾತನಾಡಿದ್ರೂ ತಪ್ಪು, ಮಾತನಾಡದಿದ್ರೂ ತಪ್ಪು.. ಈ ಅಡಕತ್ತರಿಯಲ್ಲಿ ಸಿಕ್ಕಿಕೊಂಡು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಅನೇಕರು ಮಾತನಾಡಿದ್ದಾರೆ. ಸದ್ಯ ಈ ಪ್ರಕರಣದ ಬಗ್ಗೆ ರಮೇಶ್ ಅರವಿಂದ್ ಮಾತನಾಡಿದ್ದು ದರ್ಶನ್ ರ 3D ವರ್ಷನ್ ಕಹಾನಿಯನ್ನ ಮಾರ್ಮಿಕವಾಗಿ ತೆರೆದಿಟ್ಟಿದ್ದಾರೆ. ಯೆಸ್ ರಮೇಶ್ ಅರವಿಂದ್ ದರ್ಶನ್ ಬಗ್ಗೆ ಇದೇ ಮೊದಲ ಬಾರಿ ಮಾತನಾಡಿದ್ದಾರೆ. ದರ್ಶನ್ ಪ್ರಕರಣ ಆದ ಮೇಲೆ ಸ್ಯಾಂಡಲ್ ವುಡ್ ಕಲಾವಿದರು ಒಂದು ರೀತಿ ಮುಜುಗರಕ್ಕೆ ಸಿಲುಕಿದ್ದಾರೆ. ದರ್ಶನ್ ಬಗ್ಗೆ ಮಾತನಾಡಿದ್ರೆ ಅವರ ಅಭಿಮಾನಿಗಳ ನಿಂದನೆ ಎದುರಿಸಬೇಕು. ಮಾತನಾಡದೇ ಇದ್ರೆ ಕೊಲೆಯಾದ ವ್ಯಕ್ತಿಯ ಕುಟುಂಬದ ಪರ ನಿಲ್ಲಲಿಲ್ಲ ಅನ್ನೋ ಅಪವಾದ ಬೇರೆ ಎದುರಿಸಬೇಕು. 

ದರ್ಶನ್ ವಿಚಾರ ಒಂದು ರೀತಿ ಕನ್ನಡ ಸಿನಿಕಲಾವಿದರ ಪಾಲಿಗೆ ಬಿಸಿ ತುಪ್ಪ. ಆ ಕಡೆ ನುಂಗಂಗು ಇಲ್ಲ ಈ ಕಡೆ ಉಗುಳಂಗೂ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಒಂದೇ ಒಂದು ಕಾಂಟ್ರವರ್ಸಿ ಮಾಡಿಕೊಳ್ಳದೇ, ಎಲ್ಲರ ಸ್ನೇಹವನ್ನೂ ಸಂಪಾದಿಸಿರೋ ಅಜಾತಶತ್ರು ರಮೇಶ್ ಅರವಿಂದ್.. ಈಗ ದರ್ಶನ್ ವಿಚಾರವಾಗಿ ರಮೇಶ್ ಅರವಿಂದ್ ಕೂಡ ಕಿರಿಕಿರಿಯನ್ನ ಹೇಳಿಕೊಂಡಿದ್ದಾರೆ. ಗೊತ್ತಿರುವ ವ್ಯಕ್ತಿ ತಪ್ಪು ಮಾಡಿದಾಗ ಆ ತಪ್ಪನ್ನ ತಪ್ಪು ಅನ್ನದೇ ಇರೋಕೆ ಸಾಧ್ಯವೇ ಇಲ್ಲ ಎಂದಿದ್ದಾರೆ. ನಟ ರಮೇಶ್ ಅರವಿಂದ್ ನನಗೆ ಮೂವರು ದರ್ಶನ್ ಗೊತ್ತು ಅಂತ ದರ್ಶನ್ 3 ಡಿ ವರ್ಷನ್ ಬಗ್ಗೆಯೂ ಹೇಳಿದ್ದಾರೆ. ಕಲಾವಿದನಾಗಿ ನಮ್ಮನ್ನ ರಂಜಿಸಿದ ದರ್ಶನ್ , ವೀಕೆಂಡ್ ವಿತ್ ರಮೇಶ್ ಸೀಟ್ ನಲ್ಲಿ ಕುಳಿತ ನಿನ್ನೆಯ ದರ್ಶನ್ ನ ನಾನು ನೋಡಿದ್ದೀನಿ. ಅವರು ನನಗೆ ಗೊತ್ತು. 

ಆದ್ರೆ ಇಂದಿನ ಕೊಲೆಗಾರ ದರ್ಶನ್ ನನಗೆ ಗೊತ್ತಿಲ್ಲ ಎಂದಿದ್ದಾರೆ. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾದಾಗ ದರ್ಶನ್ ತಾವು ಆರಂಭಿಕ ದಿನಗಳಲ್ಲಿ ಪಟ್ಟ ಕಷ್ಟದ ಕಥೆಯನ್ನ ರಮೇಶ್ ಮುಂದೆ ಹಂಚಿಕೊಂಡಿದ್ರು. ಖ್ಯಾತ ಖಳನಟನ ಮಗನಾದ್ರೂ ಚಿತ್ರರಂಗದಲ್ಲಿ ಅನುಭವಿಸಿದ ಕಷ್ಟ, ನಷ್ಟ, ಅವಮಾನದ ಕಥೆ ಹೇಳಿದ್ರು. ಈ ಎಪಿಸೋಡ್ ನೋಡಿದ ಮೇಲೆ ದರ್ಶನ್  ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದು ಸುಳ್ಳಲ್ಲ. ವಿಕ್ ಎಂಡ್ ವಿತ್ ರಮೇಶ್ ನೋಡಿದ ದರ್ಶನ್ ಒಳಗೊಬ್ಬ ಕ್ರೂರತ್ವದ ಮನಸ್ಸಿದೆ ಅಂತ ಯಾರೂ ಊಹಿಸಿರಲಿಲ್ಲ. ಹೀಗೆ ಕಷ್ಟಪಟ್ಟು ಮೇಲೆ ಬಂದ ದರ್ಶನ್, ಬೆಳೆದ ಮೇಲೆ ಬದಲಾದ್ರು. ವಿವಾದದ ಮೇಲೆ ವಿವಾದ ಮಾಡಿಕೊಂಡ್ರು. ಸದ್ಯ ಕೊಲೆಯನ್ನೇ ಮಾಡಿ ಜೈಲು ಸೇರಿದ್ದಾರೆ. ಇಂಥಾ ದರ್ಶನ್ ನಾಳೆಯ ದಿನ  ಬದಲಾಗಲಿ.. ಅವರು ಮತ್ತೆ ನಿನ್ನೆಯ ದರ್ಶನ್ ಆಗಲಿ ಅಂತ ಹಾರೈಸಿದ್ದಾರೆ ರಮೇಶ್ ಅರವಿಂದ್ ಹಾರೈಸಿದ್ದಾರೆ.