News Hour: ವಾಲ್ಮೀಕಿ ಪ್ರಕರಣದಲ್ಲಿ 4907 ಪುಟಗಳ ಚಾರ್ಜ್‌ಶೀಟ್‌, ಮಾಜಿ ಸಚಿವ ನಾಗೇಂದ್ರ ಮಾಸ್ಟರ್‌ ಮೈಂಡ್‌!

ವಾಲ್ಮೀಕಿ ಹಗರಣಲ್ಲಿ 4907 ಪುಟಗಳ ಚಾರ್ಜ್‌ಶೀಟ್‌ಅನ್ನು ಇಡಿ ಸಲ್ಲಿಕೆ ಮಾಡಿದೆ. ಮಾಜಿ ಸಚಿವ ಹಾಗೂ ಹಾಲಿ ಶಾಸಕ ನಾಗೇಂದ್ರ 187 ಕೋಟಿ ರೂಪಾಯಿ ಹಗರಣದ ಮಾಸ್ಟರ್‌ ಮೈಂಡ್‌ ಎಂದು ಇಡಿ ಹೇಳಿದ್ದು, 25 ಜನರ ವಿರುದ್ಧ ಚಾರ್ಜ್‌ಶೀಟ್‌ ದಾಖಲು ಮಾಡಲಾಗಿದೆ.
 

First Published Sep 10, 2024, 10:56 PM IST | Last Updated Sep 10, 2024, 10:56 PM IST

ಬೆಂಗಳೂರು (ಸೆ.10): ಹಾಲಿ ಸರ್ಕಾರ ಮೊದಲ ಪ್ರೈಮ್‌ ಹಗರಣ ವಾಲ್ಮೀಕಿ ಕೇಸ್‌ನಲ್ಲಿ ಜಾರಿ ನಿರ್ದೇಶನಾಲಯ 4907 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. 187 ಕೋಟಿ ರೂಪಾಯಿಯ ಅಕ್ರಮದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಮಾಸ್ಟರ್‌ ಮೈಂಡ್‌ ಎಂದು ಇಡಿ ಹೇಳಿದೆ.

ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಬಿ. ನಾಗೇಂದ್ರ. ಮಾಜಿ ಸಚಿವ ನಾಗೇಂದ್ರನ ಅಣತಿಯಂತೆ ನಡೆದಿತ್ತು ವಾಲ್ಮೀಕಿ ಹಗರಣ. ನಾಗೇಂದ್ರ ಸೂಚನೆಯಂತೆ ಅಕ್ರಮವಾಗಿ ಸರ್ಕಾರದ ಖಜಾನೆ ಲೂಟಿ ಮಾಡಲಾಗಿದೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರನೇ ಮಾಸ್ಟರ್ ಮೈಂಡ್ ಮತ್ತು ಲೋಕಸಭೆ ಚುನಾವಣೆಗೆ ಹಣ ಬಳಕೆ!

ಬಿ.ನಾಗೇಂದ್ರ, ಸತ್ಯನಾರಾಯಣ ವರ್ಮಾ, ಸತ್ಯನಾರಾಯಣ ಇಟಕಾರಿ, ನಿಗಮದ ಎಂಡಿ ಪದ್ಮನಾಭ ಸೇರಿ 25 ಆರೋಪಿ ವಿರುದ್ಧ ದೋಷಾರೋಪ ಮಾಡಲಾಗಿದೆ. ನಿಗಮದ ಕಚೇರಿ ಹೊರಗೆ ಹಲವು ಬಾರಿ ನಾಗೇಂದ್ರ ಮೀಟಿಂಗ್ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಾಗೇಂದ್ರ ಉಪಖಾತೆ ತೆರೆಸಿದ್ದ ಎಂದು ತಿಳಿಸಿದ್ದಾರೆ.