ಗಣೇಶ ಚತುರ್ಥಿಯಂದು ಕಣ್ಮರೆಯಾದ ತಾಯಿ: ಅಪ್ಪನ ಕೃತ್ಯಕ್ಕೆ ಅನಾಥವಾದ ಮಗಳು!

ಗಣೇಶ ಚತುರ್ಥಿ ಹಬ್ಬದ ದಿನ ತಾಯಿಯೊಬ್ಬರು ಕಾಣೆಯಾಗಿ ನಂತರ ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ತನಿಖೆಯ ವೇಳೆ ಪತಿಯೇ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

First Published Sep 11, 2024, 7:21 PM IST | Last Updated Sep 11, 2024, 7:21 PM IST

ವಿಡಿಯೋ ನ್ಯೂಸ್: ಅದು ಗಂಡು ದಿಕ್ಕಿಲ್ಲದ ಮನೆ... ಅಮ್ಮ ಮಗಳು ಮಾತ್ರ ಆ ಮನೆಯಲ್ಲಿ ವಾಸವಿದ್ರು.. ಇದ್ದ ಅಂಗೈಷ್ಟು ಭೂಮಿಯಲ್ಲಿ ಅಮ್ಮ ವ್ಯವಸಾಯ ಮಾಡ್ತಿದ್ರೆ ಮಗಳು ಕಂಪ್ಯೂಟರ್​​ ಕೋಚಿಂಗ್​​​ಗೆ ಹೋಗ್ತಿದ್ದಳು.. ಕಷ್ಟ ಇದ್ರೂ ಅಮ್ಮ ಮಗಳು ನೆಮ್ಮದಿಯಾಗಿದ್ರು.. ಆದ್ರೆ ಆವತ್ತು ಗಣೇಶನ ಹಬ್ಬ ಇತ್ತು.. ಗ್ರಾಮದಲ್ಲಿ ಗಣೇಶನನ್ನ ಕೂರಿಸಿದ್ರು.. ಮಗಳು ಗಣೇಶನಿಗೆ ಪೂಜೆ ಮಾಡಿಸಿ ಬತೀ್ನಿ ಅಂತ ಹೋದಳು,.. ಆದ್ರೆ ವಾಪಸ್​​ ಬರುವ ಹೊತ್ತಿಗೆ ಅಮ್ಮ ಮನೆಯಲ್ಲಿ ಇರಲಿಲ್ಲ.. ಎಲ್ಲಿ ಹುಡುಕಿದರೂ ಅವಳ ಸುಳಿವು ಸಿಗೋದಿಲ್ಲ.. ಮರು ದಿನ ಕಂಪ್ಲೆಂಟ್​​ ಕೊಟ್ಟಳು ಆದ್ರೂ ಯಾವುದೇ ಪ್ರಯೋಜನ ವಾಗೋದಿಲ್ಲ.. ಆದ್ರೆ ಮೂರು ದಿನದ ನಂತರ ಅಮ್ಮ ಕೆರೆಯಲ್ಲಿ ಹೆಣವಾಗಿ ಸಿಕ್ಕಳು.

 ಸಿಸಿ ಕ್ಯಾಮರಾಗಳಿಂದ ಹಂತಕರು ಗಂಡ ಮತ್ತು ಆತನ ಸ್ನೇಹಿತ ಅನ್ನೋದು ಗೊತ್ತಾಯ್ತು.. ಅವರನ್ನ ಎತ್ತಾಕೊಂಡು ಬಂದು ವರ್ಕ್​ ಮಾಡಿದಾಗ ಅವರು ಕೊಲೆ ಮಾಡಿರೋದಾಗಿ ಒಪ್ಪಿಕೊಂಡ್ರು.. ಆದ್ರೆ ಹೆಂಡತಿಯನ್ನೇ ಕೊಲ್ಲುವಷ್ಟು ಕೋಪ ಆ ಗಂಡನಿಗೆ ಏನಿತ್ತು. ಅವರಿಬ್ಬರು ಮದುವೆಯಾಗಿ 20 ವರ್ಷವಾಗಿತ್ತು.. ಆದ್ರೆ ಯಾವತ್ತೂ ಖುಷಿ ಖುಷಿಯಾಗಿ ಸಂಸಾರ ಮಾಡಿದವರಲ್ಲ. ಮಗಳು ಹುಟ್ಟಿದ ಮೇಲಂತೂ ಗಂಡನ ಕಿರಿಕಿರಿ ಜಾಸ್ತಿಯಾಯ್ತು. ಪ್ರತೀ ನಿತ್ಯ ಕುಡಿದು ಬಂದು ಜಗಳ ಮಾಡ್ತಿದ್ದ ಹೆಂಡತಿ ಮಗಳಿಗೆ ಹೊಡೆಯುತ್ತಿದ್ದ. ಆದ್ರೆ ನೋಡೋವರೆಗೂ ನೋಡಿದ ಹೆಂಡತಿ ಒಂದು ದಿನ ಗಂಡನನ್ನೇ ಮನೆಯಿಂದ ಹೊರ ಹಾಕಿದ್ಲು. ನನ್ನ ಮನೆಯಿಂದಾನೇ ಹೊರ ಹಾಕಿಬಿಟ್ಟಳಲ್ಲ ಅಂತ ಸಿಟ್ಟಾದ ಗಂಡ ಪ್ರತೀ ನಿತ್ಯ ಮನೆ ಎದುರು ಬಂದು ಜಗಳ ಮಾಡೋದಕ್ಕೆ ಶುರು ಮಾಡಿದ ಆಗ ಮೂರು ತಿಂಗಳ ಹಿಂದೆ ಹೆಂಡತಿ ಪೊಲೀಸ್​​ ಕಂಪ್ಲೆಂಟ್​​ ಕೊಟ್ಟಳು.. ಅಷ್ಟೇ ಗಂಡನ ಪಿತ್ತಾ ನೆತ್ತಿಗೇರಿತು. ತನ್ನ ಸ್ನೇಹಿತರ ಜೊತೆ ಸೇರಿ ಹೆಂಡತಿಯನ್ನೇ ಮುಗಿಸೋದಕ್ಕೆ ನಿರ್ಧರಿಸಿಬಿಟ್ಟ. ಇದೀಗ ಗಂಡ ಹೆಂಡತಿಯನ್ನೇ ಕೊಲ್ಲಿಸಿ ಇವತ್ತು ಜೈಲು ಸೇರಿದ್ದಾನೆ. ಆದ್ರೆ ಆತನ ಕೃತ್ಯದಿಂದ ಅವನ ಮಗಳೇ ಈಗ ಅನಾಥಳಾಗಿದ್ದಾಳೆ.

Read More...

Video Top Stories