Asianet Suvarna News Asianet Suvarna News

ದರ್ಶನ್‌ಗೆ ಜೈಲು ತುಂಬಿ ಮೂರು ತಿಂಗಳು, ಬಳ್ಳಾರಿ ಜೈಲಿಗೆ ಬಂದು 14 ದಿನವಾದ್ರೂ ದಾಸ​ ವಿಲವಿಲ!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ರನ್ನ ಜೈಲಿಗೆ ತುಂಬಿ ಮೂರು ತಿಂಗಳಾಗಿದೆ. ಇನ್ನು ಬಳ್ಳಾರಿ ಜೈಲಿಗೆ ಅವನನ್ನು ಶಿಫ್ಟ್‌ ಮಾಡಿ 14 ದಿನವಾದರೂ ಬವಣೆ ಮಾತ್ರ ತೀರುತ್ತಿಲ್ಲ.
 

First Published Sep 11, 2024, 11:14 PM IST | Last Updated Sep 11, 2024, 11:14 PM IST

ಬೆಂಗಳೂರು (ಸೆ.11): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್​ ಬಂಧನವಾಗಿ 90 ದಿನವಾಗಿದೆ. ಕಳೆದ ಮೂರು ತಿಂಗಳಿಂದ ಕಿಲ್ಲಿಂಗ್ ಸ್ಟಾರ್​ ದರ್ಶನ್​ಗೆ ಜೈಲೂಟವೇ ಗತಿಯಾಗಿದೆ. ಇನ್ನು ಬಳ್ಳಾರಿ ಜೈಲಿಗೆ ಬಂದು 14 ದಿನವಾದ್ರೂ ನಟ ದರ್ಶನ್​ ವಿಲವಿಲ ಅನ್ನತೊಡಗಿದ್ದಾರೆ. ಬಳ್ಳಾರಿ ಜೈಲು ವಾತಾವರಣಕ್ಕೆ ಹೊಂದಿಕೊಳ್ಳದೇ ನಟ ಕಂಗಾಲ್​ ಆಗಿದ್ದಾರೆ.

ಜೈಲಿನಲ್ಲಿ ಸಮಯ ಕಳೆಯುವುದೇ ನಟ ದರ್ಶನ್​​ಗೆ ದೊಡ್ಡ ಸವಾಲಾಗಿದೆ. ಟೈಂಪಾಸ್ ಮಾಡಲು ಜೈಲಲ್ಲಿ ದರ್ಶನ್‌ ಪುಸ್ತಕಗಳ ಮೊರೆ ಹೋಗಿದ್ದಾರೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಅವರು ಓದುತ್ತಿದ್ದು. ರಾತ್ರಿಯಿಡೀ ನಿದ್ದೆ ಮಾಡದೇ ದರ್ಶನ್‌ ಪರದಾಟ ನಡೆಸಿದ್ದಾರೆ.

'ನಿನ್ನ ಫೋಟೋ ನೋಡಿಕೊಂಡು ಹಸ್ತಮೈಥುನ ಮಾಡಿಕೊಂಡೆ..' ಪವಿತ್ರಾ ಗೌಡಗೆ ಸಂದೇಶ ಕಳಿಸಿದ್ದ ರೇಣುಕಾಸ್ವಾಮಿ!

ಜೈಲಿನಲ್ಲಿ ಶನಿವಾರ ನೀಡಿದ್ದ ಟಿವಿ ಈಗ ಕೆಟ್ಟು ಹೋಗಿದೆ. ಕೆಟ್ಟುಹೋದ ಟಿವಿಯಿಂದ ಟೈಂಪಾಸ್ ಆಗದೇ ಚಡಪಡಿಕೆಯಾಗಿದೆ. ಟಿವಿ ರಿಪೇರಿ ಮಾಡಿಸಿಕೊಡಲೂ ಜೈಲಾಧಿಕಾರಿಗೆ ಮನವಿ ಮಾಡಿದ್ದಾರೆ.