ಭಾರತ ಜಿ20 ಶೃಂಗಸಭೆ ತಯಾರಿ ಹಿಂದೆ ಟಿ20 ಪಾತ್ರ , ನಿವೃತ್ತ ರಾಯಭಾರಿ ಜೊತೆ ವಿಶೇಷ ಸಂದರ್ಶನ!

ಜಿ20 ಶೃಂಗಸಭೆ ಸೆ.9 ಹಾಗೂ 10 ರಂದು ದೆಹಲಿಯಲ್ಲಿ ನಡೆಯಲಿದೆ. ಇದಕ್ಕಾಗಿ ಭಾರತ  ಕಳೆದ ಒಂದು ವರ್ಷದಿಂದ ಪರಿಶ್ರಮವಹಿಸುತ್ತಿದೆ. ಕಳೆದೊಂದು ವರ್ಷದಿಂದ ತಯಾರಿ  ಮಾಡುತ್ತಿದೆ. ಈ ತಯಾರಿ, ರೂಪುರೇಶೆ ಕುರಿತು  ಟಿ20 ಚೇರ್ಮೆನ್, ನಿವೃತ್ತ ರಾಯಭಾರಿ ಸುಜನ್ ಚಿನೋಯ್ ಜೊತೆ ನಿವೃತ್ತ ರಾಯಭಾರಿ ಶ್ರೀನಿವಾಸನ್ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ

First Published Sep 6, 2023, 7:30 PM IST | Last Updated Sep 6, 2023, 7:32 PM IST

ದೆಹಲಿಯಲ್ಲಿ ಆಯೋಜಿಸಿರುವ ಜಿ20 ಶೃಂಗಸಭೆಗೆ  ಬಹುತೇಕ ಎಲ್ಲಾ ತಯಾರಿಗಳು ಪೂರ್ಣಗೊಂಡಿದೆ. ದ್ವಿಪಕ್ಷೀಯ ಮಾತುಕತೆ, ಜಗತ್ತು ಎದುರಿಸುತ್ತಿರುವ ಸವಾಲು, ಅದಕ್ಕೆ ಪರಿಹಾರ ಸೇರಿದಂತೆ ಹಲವು ವಿಚಾರಗಳು ಈ ಸಭೆಯಲ್ಲಿ ಚರ್ಚೆಯಾಗಲಿದೆ. ಜಿ20  ಶೃಂಗಸಭೆ  ಯಶಸ್ವಿಯಾಗಿ ಆಯೋಜಿಸಲು ಭರ್ಜರಿ ತಯಾರಿ ನಡೆದಿದೆ.  ವಸುಧೈವ ಕುಟುಂಬಕಂ  ಪರಿಕಲ್ಪನೆ ಅಡಿಯಲ್ಲಿ ಜಿ20 ಶೃಂಗ ಸಭೆ ನಡೆಯುತ್ತಿದೆ. ಜಿ20 ಶೃಂಗಸಭೆಗಾಗಿ ಪ್ರಧಾನಿ ಮೋದಿ ವಿಶೇಷ ಆಸಕ್ತಿ ವಹಿಸಿ ಪ್ರತಿಯೊಂದು ವಿಚಾರಗಳನ್ನು ಪರಿಶೀಲಿಸುತ್ತಿದ್ದಾರೆ. ಐತಿಹಾಸಿಕ ಅಂತಾರಾಷ್ಟ್ರೀಯ  ಸಭೆ ಆಯೋಜಿಸುವ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ಪ್ರಬಲ ಶಕ್ತಿಯಾಗಿ ಬೆಳೆದು ನಿಂತಿದೆ.  ಜಿ20 ತಯಾರಿ, ಜಿ20 ಸಭೆಯ  ರೂಪುರೇಶೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಟಿ20 ಚೇರ್ಮೆನ್, ನಿವೃತ್ತ ರಾಯಭಾರಿ ಸುಜನ್ ಚಿನೋಯ್ ಜೊತೆಗಿನ ವಿಶೇಷ ಸಂದರ್ಶನ ಇಲ್ಲಿದೆ.