Asianet Suvarna News Asianet Suvarna News

ನಿಮ್ಮ ಮಗ ದೆಹಲಿಯಲ್ಲಿ ಕುಳಿತಿದ್ದಾನೆ, ತಾಂಡ ಜನರಿಗೆ ಪ್ರಧಾನಿ ಮೋದಿ ಅಭಯ!

ಮೋದಿ, ಮೋದಿ ಘೋಷಣೆ, ಬಿಜೆಪಿ ಪಾಳಯದಲ್ಲಿ ರಣೋತ್ಸಾಹ,  ಹಳೇ ಮೈಸೂರಿನ ಹೊರಗಡೆ ಕ್ಷೇತ್ರ ಗೆಲ್ಲಲು ಜೆಡಿಎಸ್ ಪ್ಲಾನ್, ಪ್ರಜಾಧ್ವನಿ ಮೂಲಕ ಕಾಂಗ್ರೆಸ್ ಚುರುಕು, ಕರ್ನಾಟಕಕ್ಕೆ ಬರುವುದು ಹೋಗುವ ಮೋದಿ ಆಟ ನಡೆಯಲ್ಲ ಎಂದ ಹೆಚ್‌ಡಿಕೆ ಸೇರಿದಂತೆ ಇಂದಿನ ಇಡೀ ದಿನದ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಕಲ್ಯಾಣ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ ಹೊಸ ಇತಿಹಾಸ ರಚಿಸಿದೆ. ಯಾದಗಿರಿ ಹಾಗೂ ಕಲಬರುಗಿಯಲ್ಲಿ ಮೋದಿ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು. ಜನರನ್ನು ನೋಡಿದ ಉತ್ಸಾಹದಲ್ಲಿ ಮೋದಿ, ಜನರತ್ತೆ ತೆರಳಿ ಕೈಬೀಸಿ ದನ್ಯವಾದ ಅರ್ಪಿಸಿದರು. ಎರಡು ಜಿಲ್ಲೆಗಳಲ್ಲಿ 10,000 ಕೋಟಿ ರೂಪಾಯಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು.  ಇದೇ ವೇಳೆ ಹಕ್ಕು ಪತ್ರ ವಿತರಣೆ ವೇಳೆ ತಾಯಿ ಆಶೀರ್ವಾದ ಕುರಿತು ಮೋದಿ ಮಾತನಾಡಿದರು. ತಾಯಿ ನನಗೆ ಆಶೀರ್ವಾದ ಮಾಡಿದ್ದಾರೆ. ಇದು ನನದೆ ಪ್ರೇರಣೆಯಾಗಿದೆ. ಇಷ್ಟೇ ಅಲ್ಲ ನಿಮ್ಮ ಮಗ ದೆಹಲಿಯಲ್ಲಿ ಕುಳಿತಿದ್ದಾರೆ. ಯಾವುದೇ ಆತಂಕ ಬೇಡ ಎಂದು ಮೋದಿ ಅಭಯ ನೀಡಿದರು.
 

Video Top Stories