ಯಾರಿದು ಕೆ.ಕವಿತಾ? ದೆಹಲಿಯಲ್ಲಿ ಸದ್ದುಮಾಡುತ್ತಿರುವ ದಕ್ಷಿಣದ ರಾಜಕಾರಣಿ!

ದೆಹಲಿಯ ಆಪ್‌ ಸರ್ಕಾರಕ್ಕೆ ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಸಿಲುಕಿಹಾಕಿಕೊಂಡಿದೆ. ಆಪ್‌ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಬಲಗೈ ಆಗಿದ್ದ ಮನೀಸ್‌ ಸಿಸೋಡಿಯಾರನ್ನು ಸಿಬಿಐ ಬಂಧಿಸಿದೆ. ಇದರ ನಡುವೆ ದಕ್ಷಿಣದ ರಾಜಕಾರಣಿ ಕೆ. ಕವಿತಾ ಹೆಸರು ಕೂಡ ಇದರಲ್ಲಿ ಕೇಳಿಬರುತ್ತಿದೆ.

First Published Mar 8, 2023, 4:18 PM IST | Last Updated Mar 8, 2023, 4:18 PM IST

ನವದೆಹಲಿ (ಮಾ. 8): ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಕೆ.ಕವಿತಾ ಅವರ ಹೆಸರು ರಾಷ್ಟ್ರ ಮಟ್ಟದಲ್ಲು ಸುದ್ದಿ ಮಾಡುತ್ತಿದೆ. ಒಳ್ಳೆಯ ವಿಚಾರಕ್ಕಾಗಿ ಅಲ್ಲ. ದೆಹಲಿಯ ಆಪ್‌ ಸರ್ಕಾರದ ಅಕ್ರಮ ಮದ್ಯನೀತಿ ಪ್ರಕರಣದಲ್ಲಿ ಇವರ ಹೆಸರು ತಳುಕುಹಾಕಿಕೊಂಡಿದೆ.  ದೆಹಲಿಯಲ್ಲಿ ಹೊಸ ಅಬಕಾರಿ ನೀತಿ ಜಾರಿಗೆ ತಂದ ಆಪ್‌ ಸರ್ಕಾರ, ದೆಹಲಿಗೆ 2000 ಕೋಟಿ ಆದಾಯ ಹೆಚ್ಚಿಸುವುದಾಗಿ ಹೇಳಿತ್ತು. ದೆಹಲಿಯನ್ನು 32 ವಲಯಗಳಾಗಿ ವಿಂಗಡಿಸಿ 846 ಅಂಗಡಿಗಳಿಗೆ ಪರವಾನಗೆ ಕೊಡಲು ತೀರ್ಮಾನಿಸಲಾಗಿತ್ತು. 

ಸ್ಪಿರಿಟ್‌ ಪೂರೈಕೆ ಮಾಡಲು ಕರೆದಿದ್ದ ಗುತ್ತಿಗೆಯಲ್ಲಿ ಆಪ್ ನಾಯಕರಿಗೆ 100 ಕೋಟಿ ಕಿಕ್ ಬ್ಯಾಕ್ ಆಗಿದೆ ಎನ್ನುವ ಆರೋಪವಿದೆ. ಈ 32 ವಲಯಗಳಲ್ಲಿ 9 ವಲಯಗಳಿಗೆ ಸ್ಪಿರಿಟ್‌ ಪೂರೈಕೆಯ ಗುತ್ತಿಗೆ ಸೌತ್ ಗ್ರೂಪ್ ಗೆ ಸಿಗುತ್ತೆ. ಈ ಸೌತ್ ಗ್ರೂಪ್ ಮುಖ್ಯಸ್ಥ ಯಾರೆಂದರೆ, ಹೈದರಾಬಾದ್ ಮೂಲದ ಉದ್ಯಮಿ ಹಾಗೂ ಇಡಿಯಿಂದ ಬಂಧನವಾಗಿರುವ ಅರುಣ್ ಪಿಳೈ. ಈತ ಕೆ .ಕವಿತಾ ಅವರ ಆಪ್ತ. 

ದೆಹಲಿ ಮದ್ಯ ನೀತಿ ಹಗರಣ: ಸಿಬಿಐನಿಂದ ಕೆಸಿಆರ್‌ ಪುತ್ರಿ ಕವಿತಾ ವಿಚಾರಣೆ

ಈ ಸೌತ್ ಗ್ರೂಪ್ ಕಂಪನಿಯನ್ನು ಕವಿತಾ ಅವರೇ ನಿಯಂತ್ರಣ ಮಾಡುತ್ತಿದ್ದಾರೆ. ಅಲ್ಲದೇ  ಈ 9 ವಲಯಗಳ ಗುತ್ತಿಗೆ ಪಡೆಯಲು 100 ಕೋಟಿ ರೂಪಾಯಿ ಕಿಕ್ ಬ್ಯಾಕ್ ಆಪ್ ನಾಯಕರಿಗೆ ತಲುಪಿದೆ. ಈ ಹಣ ಗುಜರಾತ್ ಮತ್ತು ಪಂಜಾಬ್ ಚುನಾವಣೆ ಯಲ್ಲಿ ಆಪ್ ಪಕ್ಷ ಬಳಸಿದೆ ಎಂದು ಆರೋಪಿಸಲಾಗುತ್ತಿದೆ.
 

Video Top Stories