ಚೀನಾದಿಂದ ಕಾಂಗ್ರೆಸ್‌ಗೆ 1 ಕೋಟಿ ರೂ. ದೇಣಿಗೆ: ಅಮಿತ್ ಶಾ ಸ್ಫೋಟಕ ಮಾಹಿತಿ

ಕಾಂಗ್ರೆಸ್‌ ಪಕ್ಷಕ್ಕೆ ಚೀನಾ 1 ಕೋಟಿ ರೂ. ದೇಣಿಗೆ ಕೊಟ್ಟಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.

First Published Dec 13, 2022, 3:40 PM IST | Last Updated Dec 13, 2022, 3:40 PM IST

ಚೀನಾ ರಾಯಭಾರ ಕಚೇರಿಯಿಂದ ಕಾಂಗ್ರೆಸ್‌ಗೆ ದೇಣಿಗೆ ಸಂದಾಯವಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ. 2005-2007ರ ಅವಧಿಯಲ್ಲಿ ಸೋನಿಯಾಗಾಂಧಿ ನೇತೃತ್ವದ ರಾಜೀವ್ ಗಾಂಧಿ ಫೌಂಡೇಶನ್ ಚೀನಾ ರಾಯಭಾರ ಕಚೇರಿಯಿಂದ 1.35 ಕೋಟಿ ರೂಪಾಯಿ ಅನುದಾನವನ್ನು ಪಡೆದಿದೆ ಎಂದು ಹೇಳಿದರು. ಕಾಂಗ್ರೆಸ್‌ ಪಕ್ಷವು ಗಡಿ ಸಂಘರ್ಷವನ್ನು ರಾಜಕೀಯಗೊಳಿಸುತ್ತಿದೆ. ಕಾಂಗ್ರೆಸ್‌ ಅವಧಿಯಲ್ಲೇ ಚೀನಾದಿಂದ ನಮ್ಮ ಜಾಗ ಅತಿಕ್ರಮಣಲಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ. ಚೀನಾಗೆ ಒಂದಿಂಚು ಜಾಗವನ್ನು ನಾವು ಬಿಟ್ಟು ಕೊಟ್ಟಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.