ಭಾರತ್ ಜೋಡೋನಲ್ಲಿ ಕರ್ನಾಟಕ ಮಾಜಿ ಸಚಿವರ ಪತ್ನಿ ಕೈಹಿಡಿದು ನಡೆದ ರಾಹುಲ್ ಗಾಂಧಿ
ಕರ್ನಾಟಕದ ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರ ಪತ್ನಿ ಮೀನಾಕ್ಷಿ ಕೈಹಿಡಿದು ಸಾಗಿದ ರಾಹುಲ್ ಗಾಂಧಿ.
ರಾಜಸ್ಥಾನ (ಡಿ.13): ಕಳೆದ ಮೂರು ತಿಂಗಳಿಂದ ನಡೆಯುತ್ತಿರುವ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು ಈಗ ರಾಜಸ್ಥಾನದಲ್ಲಿ ಸಾಗುತ್ತಿದ್ದು, ಇಂದು ರಾಹುಲ್ ಗಾಂಧಿ ಅವರು ಕರ್ನಾಟಕದ ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರ ಪತ್ನಿ ಮೀನಾಕ್ಷಿ ಕೈಹಿಡಿದು ಸಾಗಿದರು. ಈ ವೇಳೆ ಮೀನಾಕ್ಷಿ ಅವರು ಆಶ್ಚರ್ಯ ಮತ್ತು ಖುಷಿಯಿಂದಲೇ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಈ ವೇಳೆ ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರೂ ಕೂಡ ಭಾಗಿಯಾಗಿದ್ದರು.
ಮುಂಬರುವ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಒಂದು ರಾಜ್ಯಕ್ಕೆ ಸೀಮಿತವಾಗಿದೆ. ಆದರೆ, ಕಾಂಗ್ರೆಸ್‌ನಿಂದ ರಾಹುಲ್ ಗಾಂಧಿ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ಆಡಳಿತ ಪುನಃಸ್ಥಾಪಿಸುವ ಉದ್ದೇಶದಿಂದ ಎಲ್ಲ ರಾಜ್ಯಗಳಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದ್ದಾರೆ. ಮೂರು ತಿಂಗಳ ಹಿಂದೆ ಸೆಪ್ಟಂಬರ್ 07ರಂದು ದೇಶದ ದಕ್ಷಿಣ ತುದಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಲಾಗಿತ್ತು. ಇನ್ನು ಸೆ.13 ರಂದು ಕೇರಳದ ರಾಜಧಾನಿ ತಿರುವನಂತಪುರಂ ಬಳಿಯ ಕನಿಯಪುರಂನಲ್ಲಿ ಭಾರತ್ ಜೋಡೋ ಯಾತ್ರೆ ಆರಂಭಿಸಿ ಸೆ.29ಕ್ಕೆ ಯಾತ್ರೆ ಪೂರ್ಣಗೊಳಿಸಿ ಕರ್ನಾಟಕಕ್ಕೆ ಸೆ.30 ರಂದು ಆಗಮಿಸಿತು. ಹೀಗೆ 93 ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ. ಆದರೆ, ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ವೇಳೆ ಎರಡು ದಿನ ಮಾತ್ರ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.
ಭಾರತ್ ಜೋಡೋ ಯಾತ್ರೆಗೆ ಹೊಸ ತಲೆನೋವು, ಕಳ್ಳರಿದ್ದಾರೆ ಎಚ್ಚರಿಕೆ ಎಂದ ಪೊಲೀಸ್!
ರಾಜ್ಯದಲ್ಲಿ 18 ದಿನ ನಡೆದಿದ್ದ ಯಾತ್ರೆ: ದೇಶದ ಐಕ್ಯತೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಸೆಪ್ಟಂಬರ್ 30 ರಂದು ಆರಂಭವಾಗಿ ಒಟ್ಟು 18 ದಿನಗಳ ಕಾಲ ಪಾದಯಾತ್ರೆ ನಡೆಯಿತು. ರಾಜ್ಯದಲ್ಲಿ ಗುಂಡ್ಲುಪೇಟೆಯಿಂದ ಆರಂಭವಾದ ಯಾತ್ರೆಯು ಭಾರತ್ ಜೋಡೋ ಯಾತ್ರೆ 7 ಜಿಲ್ಲೆಗಳಲ್ಲಿ ಸಾಗಿತ್ತು. ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ರಾಯಚೂರಿನಲ್ಲಿ ಯಾತ್ರೆ ಸಾಗಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳು ನಾಯಕರು ಕೂಡ ಈ ಯಾತ್ರೆಯಲ್ಲಿ ಭಾಗವಹಿಸುವಂತೆ ಯೋಜನೆ ಮಾಡಲಾಗಿತ್ತು.
ಶತಮಾನದ ದೊಡ್ಡ ಯಾತ್ರೆ : ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು ದೇಶದ ರಾಜಕೀಯ ಇತಿಹಾಸದಲ್ಲಿ ಹಮ್ಮಿಕೊಂಡಿರುವ ದೊಡ್ಡ ಯಾತ್ರೆಯಾಗಿದ್ದು, ಇದನ್ನು ಈ ಶತಮಾನದ ದೊಡ್ಡ ಯಾತ್ರೆಯೆಂದರೂ ತಪ್ಪಾಗಲಾರದು. ದೇಶದ ದಕ್ಷಿಣ ತುದಿ ಕನ್ಯಾಕುಮಾರಿಯಿಂದ ಉತ್ತರದ ತುದಿ ಕಾಶ್ಮೀರದವರೆಗೆ ಯಾತ್ರೆಯನ್ನು ಮಾಡುತ್ತಿದ್ದು ಒಟ್ಟು 3,750 ಕಿ.ಮೀ ಸಂಚಾರ ಮಾಡುವ ಉದ್ದೇಶವನ್ನು ಹೊಂದಿದೆ. ಒಟ್ಟು 150 ದಿನಗಳು ಯಾತ್ರೆ ನಡೆಯಲಿದ್ದು, ಪ್ರತಿನಿತ್ಯ ಕನಿಷ್ಠ 6-7 ಗಂಟೆಗಳು ಸುಮಾರು 22-23 ಕಿ.ಮೀ ನಡೆಯಲು ಯೋಜನೆ ಮಾಡಲಾಗಿದೆ. ಅದರಂತೆ ಯಾತ್ರೆಯು ಸಾಗಿದ್ದು, ಈವರೆಗೆ 93 ದಿನಗಳು ಪೂರ್ಣಗೊಂಡಿವೆ.
ಹಿಂದೂ ಎಲ್ಲಿ ಹಿಂದೂ... ರಾಹುಲ್ ಗಾಂಧಿ ಪ್ರಶ್ನಿಸುತ್ತಿರುವ ನೆಟ್ಟಿಗರು
ಯಾತ್ರೆ ಪೂರ್ಣಗೊಂಡ ರಾಜ್ಯಗಳು:
ತಮಿಳುನಾಡು
ಕರ್ನಾಟಕ
ಆಂಧ್ರಪ್ರದೇಶ
ತೆಲಂಗಾಣ
ಮಹಾರಾಷ್ಟ್ರ
ಮಧ್ಯಪ್ರದೇಶ
ರಾಜಸ್ಥಾನ