G 20 Summit: ಭಾರತದ ಅಸ್ಮಿತೆಯನ್ನು ಜಗತ್ತಿಗೆ ತೋರಿಸಲಿದೆ ಜಿ20

ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಬಗ್ಗೆ ಮಾತನಾಡಿರುವ ನಿವೃತ್ತ ರಾಯಭಾರಿ ಮೋಹನ್‌ ಕುಂಆರ್‌, ಜಿ20ಯ ಮೂಲಕ ಣಾವು ಜಗತ್ತಿಗೆ ನಮ್ಮ ಅಸ್ಮಿತೆಯನ್ನು ತೋರಿಸಲಿದ್ದೇವೆ ಎಂದಿದ್ದಾರೆ.
 

First Published Sep 7, 2023, 7:52 PM IST | Last Updated Sep 7, 2023, 7:52 PM IST

ನವದೆಹಲಿ (ಸೆ.7): ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆಲಿರುವ ಜಿ20 ಶೃಂಗಸಭೆಗೆ ದೇಶ ಭರ್ಜರಿಯಾಗಿ ಸಿದ್ಧವಾಗುತ್ತಿದೆ. ನವದೆಹಲಿಯ ಭಾರತ ಮಂಟಪದಲ್ಲಿ ಇದರ ಪೂರ್ವಸಿದ್ಧತಾ ಕೆಲಸಗಳು ನಡೆಯುತ್ತಿವೆ. ಈ ನಡುವೆ ನಿವೃತ್ತ ರಾಯಭಾರಿ ಮೋಹನ್‌ ಕುಮಾರ್‌, ಏಷ್ಯಾನೆಸ್‌ ನ್ಯೂಸ್‌ ಜೊತೆ ಮಾತನಾಡಿದ್ದು, ಜಿ20 ಶೃಂಗಸಭೆಯಲ್ಲಿ ಭಾರತಕ್ಕೆ ಆಗುವ ಲಾಭವೇನು ಅನ್ನೋದರ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ನಾನು ಸಾಕಷ್ಟು ದೇಶದ ರಾಯಭಾರಿಗಳೊಂದಿಗೆ ಮಾತನಾಡಿದ್ದೇನೆ. ಭಾರತದ ತನ್ನ ಅಸ್ಮಿತೆಯನ್ನು ಜಿ20 ಮೂಲಕ ಜಗತ್ತಿಗೆ ತೋರಿಸಲಿದೆ ಎಂದು ಅವರು ಹೇಳಿದ್ದಾರೆ.  ಜಿ20 ಶೃಂಗಸಭೆ ಸೆ.9 ಹಾಗೂ 10 ರಂದು ದೆಹಲಿಯಲ್ಲಿ ನಡೆಯಲಿದೆ. ಇದಕ್ಕಾಗಿ ಭಾರತ  ಕಳೆದ ಒಂದು ವರ್ಷದಿಂದ ಪರಿಶ್ರಮವಹಿಸುತ್ತಿದೆ. ಕಳೆದೊಂದು ವರ್ಷದಿಂದ ತಯಾರಿ  ಮಾಡುತ್ತಿದೆ. ಈ ತಯಾರಿ, ರೂಪುರೇಶೆ ಕುರಿತು   ನಿವೃತ್ತ ರಾಯಭಾರಿ ಮೋಹನ್ ಕುಮಾರ್ ಜೊತೆ ನಿವೃತ್ತ ರಾಯಭಾರಿ ಟಿ.ಪಿ. ಶ್ರೀನಿವಾಸನ್ ನಡೆಸಿದ ವಿಶೇಷ ಸಂದರ್ಶನದ ವಿವರ ಇಲ್ಲಿದೆ.

G20 Summit: ಮಹತ್ವದ ಶೃಂಗಸಭೆಗೆ ಭಾರತದ ಪ್ರಮುಖ ಶಾಶ್ವತ ಕೊಡುಗೆ ಏನು? ಇದರ ಉದ್ದೇಶ, ಕೊಡುಗೆಗಳು ಹೀಗಿದೆ..