ನಟಿ ನವ್ಯಾ ಭರತನಾಟ್ಯ ಕಲಾವಿದೆಯಾಗಿದ್ದ ಕಾರಣಕ್ಕೆ ಚಿನ್ನದ ಕಾಲ್ಗೆಜ್ಜೆ ಗಿಫ್ಟ್‌ ನೀಡಿದ್ದ ಸಚಿನ್‌ ಸಾವಂತ್‌!


ಬಹುಭಾಷಾ ನಟಿ, ಕನ್ನಡದ ‘ಗಜ’, ‘ದೃಶ್ಯ’, ‘ದೃಶ್ಯ 2’, ‘ನಮ್ಮ ಯಜಮಾನ್ರು’ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿರುವ ನವ್ಯಾ ನಾಯರ್​ ಹೆಸರೀಗ ಬಹಳ ಸದ್ದು ಮಾಡುತ್ತಿದೆ. 

First Published Sep 6, 2023, 7:09 PM IST | Last Updated Sep 6, 2023, 7:09 PM IST

ನವದೆಹಲಿ (ಸೆ.6): ನಟಿ ನವ್ಯಾ ನಾಯರ್‌ ಹೆಸರು ಈಗ ಜೋರು ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಐಆರ್‌ಎಸ್‌ ಅಧಿಕಾರಿ ಸಚಿವ್‌ ಸಾವಂತ್‌ ಜೊತೆಗಿನ ಆಕೆಯ ಸಂಬಂಧ. ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಇಡಿಯಿಂದ ಬಂಧಿತನಾಗಿರುವ ಐಆರ್‌ಎಸ್‌ ಅಧಿಕಾರಿ ಸಚಿನ್‌ ಸಾವಂತ್‌, ನವ್ಯಾ ನಾಯರ್‌ಗೆ ಅಂದಾಜು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಾಲ್ಗೆಜ್ಜೆಯನ್ನು ಗಿಫ್ಟ್‌ ಆಗಿ ನೀಡಿದ್ದರು ಎಂದು ವರದಿಯಾಗಿದೆ. ಇದರ ನಡುವೆ ಇಡಿ ಅಧಿಕಾರಿಗಳು ಕೊಚ್ಚಿಯಲ್ಲಿ ಕನಿಷ್ಠ 15 ರಿಂದ 20 ಬಾರಿ ಸಚಿನ್‌ ಸಾವಂತ್‌ ಹಾಗೂ ನವ್ಯಾ ನಾಯರ್‌ ಭೇಟಿ ನಡೆದಿದೆ ಎಂದು ಇಡಿ ಹೇಳಿದೆ.

ಒಂದೇ ಬಿಲ್ಡಿಂಗ್​ನಲ್ಲಿ ವಾಸ, 2 ಲಕ್ಷದ ಕಾಲ್ಗೆಜ್ಜೆ... 'ಗಜ' ನಟಿ ನವ್ಯಾ ಲವ್ವಿಡವ್ವಿ ಬಗ್ಗೆ ಡ್ರೈವರ್​ ಬಾಯ್ಬಿಟ್ಟಿದ್ದೇನು?