ಉಗ್ರ ದಾಳಿಯಲ್ಲಿ ತಂದೆ, ಚಿಕ್ಕಪ್ಪ ಇಬ್ಬರನ್ನೂ ಕಳೆದುಕೊಂಡ ಶಗುನ್‌ಗೆ ಕಾಶ್ಮೀರ ಚುನಾವಣೆಯಲ್ಲಿ ಗೆಲುವು
ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ಕಿಶ್ತ್ವಾರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಗುನ್ ಪರಿಹಾರ್ ಗೆಲುವು ಸಾಧಿಸಿದ್ದಾರೆ. 2018ರಲ್ಲಿ ಶಗುನ್ ಅವರ ತಂದೆ ಮತ್ತು ಚಿಕ್ಕಪ್ಪ ಇಬ್ಬರನ್ನೂ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಿಶ್ತ್ವಾರ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಹಾಗೂ ಪಿಎಚ್‌ಡಿ ವಿದ್ಯಾರ್ಥಿನಿ ಶಗುನ್ ಪರಿಹಾರ್ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಒಟ್ಟು 29053 ಮತಗಳನ್ನು ಪಡೆಯುವ ಮೂಲಕ ಎನ್‌ಸಿ ಅಭ್ಯರ್ಥಿ ಸಜ್ಜದ್ ಅಹಮದ್ ಕಿಚ್ಲು ಅವರನ್ನು ಸೊಲಿಸಿದ್ದಾರೆ. 2018ರಲ್ಲಿ ಶಗುನ್ ಅವರ ತಂದೆ ಮತ್ತು ಚಿಕ್ಕಪ್ಪ ಇಬ್ಬರನ್ನೂ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಸಂತೋಷ್ ಹರ್ಷ:
ಈ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಶುಗನ್ ಅವರ ಫೋಟೊವನ್ನು ಹಂಚಿಕೊಂಡು ಶುಭ ಕೋರಿದ್ದಾರೆ.
ಒಮರ್ ಅಬ್ದುಲ್ಲಾಗೆ 2 ಕ್ಷೇತ್ರದಲ್ಲೂ ಜಯ, ಮುಫ್ತಿ ಪುತ್ರಿಗೆ ಸೋಲು
ಶ್ರೀನಗರ: ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿ ಎಂದೇ ಬಿಂಬಿತ ಆಗಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಬದ್ಗಾಂ ಹಾಗೂ ಗಂದರ್‌ಬಾಲ್ ಎರಡೂ ಕ್ಷೇತ್ರದಲ್ಲಿ ಜಯಿಸಿದ್ದಾರೆ. ಈ ಮೂಲಕ ಕಳೆದ ಲೋಕಸಭೆ ಚುನಾವಣೆಯಲ್ಲಿ ಅನುಭವಿಸಿದ್ದ ಸೋಲಿನ ನೋವನ್ನು ದೂರ ಮಾಡಿಕೊಂಡಿದ್ದಾರೆ. ಆದರೆ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಅವರು ಬಿಜ್‌ಬೆಹಾರಾ ಕ್ಷೇತ್ರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ.
ಚುನಾವಣಾ ಸಮೀಕ್ಷೆಗಳು ಪೂರ್ಣ ವಿಫಲ
ನವದೆಹಲಿ: ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆಯ ಫಲಿತಾಂಶಗಳು, ಅ.5ರಂದು ಪ್ರಕಟವಾಗಿದ್ದ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳನ್ನು ಸುಳ್ಳಾಗಿಸಿವೆ. ಇದು ಜನತೆ ಮತ್ತೊಮ್ಮೆ ಸಮೀಕ್ಷೆಗಳ ವಿಶ್ವಾಸಾರ್ಹತೆ ಪ್ರಶ್ನಿಸುವಂತೆ ಮಾಡಿದೆ. ಇತ್ತೀಚೆಗೆ ಲೋಕಸಭೆ ಚುನಾವಣೆ ವೇಳೆಯೂ ಬಿಜೆಪಿಗೆ ಭರ್ಜರಿ ಬಹುಮತ ಎಂದು ಅನೇಕ ಸಮೀಕ್ಷೆ ಹೇಳಿದ್ದವು. ಆದರೆ ಅವು ಸುಳ್ಳಾಗಿದ್ದವು.
ಹರ್ಯಾಣದಲ್ಲಿ 'ಕೈ'ಗೆ ಬಂದ ಜಿಲೇಬಿ ಬಿಜೆಪಿ ಬಾಯಿಗೆ: ಕೇಸರಿ ಪಾಳಯದ ಗೆಲುವಿಗೆ ಕಾರಣ ಏನು?
ಹರ್ಯಾಣ:
ರಾಜ್ಯದಲ್ಲಿ ಹ್ಯಾಟ್ರಿಕ್ ಕನಸಿನಲ್ಲಿದ್ದ ಬಿಜೆಪಿಗೆ ಆಘಾತ ಎದುರಾಗಲಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತೊಂದಿಗೆ ದಶಕದ ಬಳಿಕ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಆ್ಯಕ್ಸಿಸ್ ಮೈ ಇಂಡಿಯಾ ಕಾಂಗ್ರೆಸ್‌ಗೆ 53-65, ರಿಪಬ್ಲಿಕ್-ಮ್ಯಾಟ್ರೈಜ್ 55-62, ದೈನಿಕ್ ಭಾಸ್ಕರ್ 44-54 ಸ್ಥಾನ ನೀಡಿತ್ತು. ಆ್ಯಕ್ಸಿಸ್ ಮೈ ಇಂಡಿಯಾ ಬಿಜೆಪಿಗೆ 18-28, ರಿಪಬ್ಲಿಕ್-ಮ್ಯಾಟ್ರೈಜ್ 18-24, ದೈನಿಕ್ ಭಾಸ್ಕರ್ 15-29 ಸ್ಥಾನ ನೀಡಿತ್ತು. ಆದರೆ ಈ ಸಮೀಕ್ಷೆಗಳು ಪೂರ್ಣ ಉಲ್ಟಾ ಆಗಿವೆ. ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.
ಜಮ್ಮು-ಕಾಶ್ಮೀರ:
ಕೆಲವು ಸಮೀಕ್ಷೆಗಳು ನ್ಯಾಷನಲ್ ಕಾನ್ಫರೆನ್ಸ್ - ಕಾಂಗ್ರೆಸ್ ಮೈತ್ರಿಕೂಟ ಅತಿಹೆಚ್ಚು ಸ್ಥಾನ ಪಡೆದರೂ ಬಹುಮತಕ್ಕೆ ಅಗತ್ಯವಾದ 46 ಸ್ಥಾನಗಳಿಗಿಂತ ಕೊಂಚ ಹಿಂದುಳಿಯಬಹುದು ಎಂದು ಹೇಳಿದ್ದವು. ಆದರೆ ಇಲ್ಲೂ ಸಮೀಕ್ಷೆಗಳು ಉಲ್ಟಾ ಆಗಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರಸ್ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.
ಆ್ಯಕ್ಸಿಸ್ ಮೈ ಇಂಡಿಯಾ ಎನ್‌ಸಿ- ಕಾಂಗ್ರೆಸ್‌ಗೆ 35-45, ರಿಪಬ್ಲಿಕ್ -ಗುಲಿಸ್ತಾನ್ 31-36, ದೈನಿಕ್ ಭಾಸ್ಕರ್ 35-40 ಸ್ಥಾನ ನೀಡಿತ್ತು.
ಇನ್ನು ಆ್ಯಕ್ಸಿಸ್ ಮೈ ಇಂಡಿಯಾ ಬಿಜೆಪಿಗೆ 24-34, ರಿಪಬ್ಲಿಕ್ - ಗುಲಿಸ್ತಾನ್ 28-30, ದೈನಿಕ್ ಭಾಸ್ಕರ್ 20-25 ಸ್ಥಾನ ನೀಡಿತ್ತು.
ರಾಮ ನಾಮ ಸ್ಮರಿಸುತ್ತಿದ್ದಂತೆ ಮಹಿಳೆಯ ಮಡಿಲಲ್ಲಿ ಮೈಮರೆತ ಮಾರುತಿ: ವೀಡಿಯೋ ವೈರಲ್