Asianet Suvarna News Asianet Suvarna News

3 ಬಾರಿ ಆರ್‌ಎಸ್ಎಸ್ ನಿಷೇಧ ಹಿಂಪಡೆದಿದೆ ಕಾಂಗ್ರೆಸ್, ಇದೀಗ ಮತ್ತೆ ಬ್ಯಾನ್ ಹಿಂದಿದೆಯಾ ಒಲೈಕೆ ರಾಜಕಾರಣ?

ಕರ್ನಾಟಕ ಪೊಲೀಸರ ಕಾರ್ಯಾಚರಣೆ ಕಚೇರಿಗೆ ಬೀಗ, ನಾಯಕರ ಬ್ಯಾಂಕ್ ಖಾತೆ ಸ್ಥಗಿತ, ಆರ್‌ಎಸ್ಎಸ್ ಬ್ಯಾನ್ ಆಗ್ಬೇಕು ಎಂದ ಸಿದ್ದುಗೆ ಬಿಜೆಪಿ ತಿರುಗೇಟು, ಪಿಎಫ್ಐ ಮೇಲಿರು ಕೇಸ್ ಸೇರಿದಂತೆ ಇಂದಿನ ಇಡೀ ದಿನದ ಸಂಪೂರ್ಣ ಸುದ್ದಿ ವಿಶ್ಲೇಷಣೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಈ ನಿರ್ಧಾರವನ್ನು ಅತ್ತ ಸ್ವಾಗತಿಸಲು ಆಗದೇ ಇತ್ತ ನಿರಾಕರಿಸಲು ಆಗದೇ ಕಾಂಗ್ರೆಸ್ ಒದ್ದಾಡುತ್ತಿದೆ. ಸ್ವಾಗತಿಸಿದರೆ ಮುಸ್ಲಿಂ ಮತ ಕೈತಪ್ಪು ಭೀತಿ ಇದೆ. ಇಷ್ಟೇ ಅಲ್ಲ ಪಿಎಫ್ಐ ಮೇಲಿನ ಕೇಸ್ ಹಿಂಪಡೆ ನಿರ್ಧಾರವೂ ತಪ್ಪು ಎಂದು ಸಾಬೀತಾಗುತ್ತದೆ. ಸಮರ್ಥಿಸಿದರೆ ಮುಸ್ಲಿಂ ವಿರುದ್ಧ ಹೇಳಿಕೆ ನೀಡಿದಂತಾಗುತ್ತದೆ ಅನ್ನೋ ಭಯ. ಹೀಗಾಗಿ ಸಿದ್ದರಾಮಯ್ಯ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ಆರ್‌ಎಸ್ಎಸ್ ಬ್ಯಾನ್ ವಿಚಾರ ಮುನ್ನಲೆಗೆ ತಂದಿದ್ದಾರೆ. ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ 3 ಬಾರಿ ಆರ್‌ಎಸ್ಎಸ್ ಬ್ಯಾನ್ ಮಾಡಿದೆ. ಬಳಿಕ ಮೂರು ಬಾರಿಯೂ ನಿಷೇಧ ಹಿಂಪಡೆದಿದೆ. ಯಾವ ಕಾರಣಕ್ಕೆ ಅಂದು ಆರ್‌ಎಸ್ಎಸ್ ಬ್ಯಾನ್ ಮಾಡಲಾಗಿತ್ತು? ಬಳಿಕ ನಿಷೇಧ ವಾಪಸ್ ಪಡೆದಿದ್ದು ಯಾಕೆ? ಇಲ್ಲಿದೆ ಸಂಪೂರ್ಣ ವಿವರ.

Video Top Stories