ಮೊದಲ ಬಾರಿಯ ಶಾಸಕನಿಗೆ ಒಲಿದ್ದು ಹೇಗೆ ಸಿಎಂ ಪಟ್ಟ..? ಯಾರು ಈ ಭಜನ್ ಲಾಲ್..? ಏನದು “ಕುರ್ಚಿ” ಕಮಾಲ್..
ಹಳ್ಳಿ ಸರಪಂಚ ಆಗಿದ್ದವರು ಈಗ ರಾಜಸ್ಥಾನ ಮುಖ್ಯಮಂತ್ರಿ..!
ಮೋದಿ-ಶಾ ಹದ್ದಿನ ಕಣ್ಣಿಗೆ ಬಿದ್ದ ಸಾದಾ ಸೀದ ಹಳ್ಳಿ ಹೈದ..!
ಮೊದಲ ಬಾರಿಯ ಶಾಸಕನಿಗೆ ಒಲಿದ್ದು ಹೇಗೆ ಸಿಎಂ ಪಟ್ಟ..?
ಒಬ್ಬ ಸಾಮಾನ್ಯ ಕಾರ್ಯಕರ್ತ, ಅಪ್ಪಟ ಪಕ್ಷ ನಿಷ್ಠ. ರಾಜಕೀಯ ಹಿನ್ನೆಲೆಯೂ ಇಲ್ಲ, ಹಣಬಲ, ಜಾತಿಬಲವೂ ಇಲ್ಲ. ಇದ್ದ ಬಲ ಒಂದೇ.. ಅದು ಮೋದಿ ಬಲ. ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದ ವ್ಯಕ್ತಿಯೀಗ ರಾಜಸ್ಥಾನದ ಮುಖ್ಯಮಂತ್ರಿ. ಇದು ಭಜನ್ ಲಾಲ್ ಶರ್ಮಾ(Bhajan Lal Sharma) ಅನ್ನೋ ರಾಜಕೀಯ ಅಪರಿಚಿತನ ಇಂಟ್ರೆಸ್ಟಿಂಗ್ ಕಥೆ. ಇವ್ರು ರಾಜಸ್ಥಾನದ(Rajasthan) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭಜನ್ ಲಾಲ್ ಶರ್ಮಾ. ಶಾಸಕನಾಗಿ ಆಯ್ಕೆಯಾದ ಕೇವಲ 12 ದಿನಗಳಲ್ಲಿ ಸಿಎಂ ಪಟ್ಟ. ಮೊದಲ ಬಾರಿ ಶಾಸಕ, ಈಗ ನೋಡಿದ್ರೆ ರಾಜಸ್ಥಾನದ ಮುಖ್ಯಮಂತ್ರಿ. ಇದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿ ಕೊಟ್ಟಿರೋ ಮತ್ತೊಂದು ಬಿಗ್ ಸರ್ಪೈಜ್. ಭಜನ್ ಲಾಲ್ ಶರ್ಮಾ. ವಯಸ್ಸು 57.. ಹುಟ್ಟುಹಬ್ಬದ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ. ಇಂಟ್ರೆಸ್ಟಿಂಗ್ ಸಂಗತಿ ಏನ್ ಗೊತ್ತಾ ವೀಕ್ಷಕರೇ.. ನಾನು ಮುಖ್ಯಮಂತ್ರಿಯಾಗ್ತೇನೆ ಅನ್ನೋದು ಸ್ವತಃ ಭಜನ್ ಲಾಲ್ ಅವ್ರಿಗೇ ಗೊತ್ತಿರ್ಲಿಲ್ಲ. ಶಾಸಕಾಂಗ ಪಕ್ಷದ ಸಭೆಗೆ ಒಬ್ರೇ ನಡ್ಡೊಂಡ್ ಬಂದಿದ್ರು, ಕೊನೆಯ ಸಾಲಿನಲ್ಲಿ ಕೂತ್ಕೊಂಡಿದ್ರು. ಫಸ್ಟ್ ಟೈಮ್ ಎಂಎಲ್ಎ. ಸಿಎಂ ಆಗ್ತೀನಿ ಅನ್ನೋ ಕನಸು ಕಾಣೋದಕ್ಕಾದ್ರೂ ಸಾಧ್ಯಾನಾ..? ಆದ್ರೆ ಪ್ರಧಾನಿ ಮೋದಿಯವರ ಮನಸ್ಸಲ್ಲಿದ್ದದ್ದೇ ಬೇರೆ.. ಮೋದಿಯವರೋ.., ಶಾಸಕನಾಗೋದಕ್ಕೂ ಮೊದ್ಲೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವರು. ಮೋದಿಯವರ ನಿರ್ಧಾರಗಳೂ ಅಷ್ಟೇ, ಅದು ಹೀಗೇ ಇರ್ತವೆ ಅಂತ ಊಹಿಸೋಕೂ ಸಾಧ್ಯವಿಲ್ಲ. ಕಲ್ಪನೆಗೂ ನಿಲುಕದ ನಿರ್ಧಾರಗಳಿಗೆ ಮೋದಿ ಫೇಮಸ್. ಅಂಥಾ ಮೋದಿ ರಾಜಸ್ಥಾನದ ಮುಖ್ಯಮಂತ್ರಿ ಯಾರಾಗ್ಬೇಕು ಅನ್ನೋದನ್ನು ಡಿಸೈಡ್ ಮಾಡಿ ಬಿಟ್ಟಿದ್ರು. ಅದು ಗೊತ್ತಾಗಿದ್ದು, ಮೊನ್ನೆ ಮೊನ್ನೆ ಜೈಪುರದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ.
ಇದನ್ನೂ ವೀಕ್ಷಿಸಿ: ವೀರ್ ಸಾವರ್ಕರ್‌ಗೆ ಯಾಕಿಷ್ಟು ವಿರೋಧ..? ಅವರು ಗಾಂಧೀಜಿ ಹತ್ಯೆ ಆರೋಪಿಯಾಗಿದ್ರಾ ?