Asianet Suvarna News Asianet Suvarna News

ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಬ್ಲಾಸ್ಟ್ ಉಗ್ರರ ವಿಚಾರಣೆ, ಬಯಲಾಯ್ತು ಸ್ಫೋಟಕ ಮಾಹಿತಿ

ಬೆಂಗಳೂರು ರಾಮೇಶ್ವರಂ ಕಫೆ ಸ್ಫೋಟ ಉಗ್ರರ ಭಯಾನಕ ಸ್ಟೋರಿ, ಹಿಂದೂಗಳ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿದ್ದ ಉಗ್ರರು, ನಾಳೆ 5 ಗಂಟೆಗೆ ಮೈಸೂರಿನಲ್ಲಿ ಮೋದಿ ಸಮಾವೇಶ, ಯಧುವೀರ ಪರ ಪ್ರಚಾರ, ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಭೇಟಿಯಾದ ಸಿದ್ದರಾಮಯ್ಯ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆ ತಂದಿರುವ ಎನ್ಐಎ 10 ದಿನಗಳ ಕಸ್ಟಡಿಗೆ ಪಡೆದಿದ್ದಾರೆ.  ಇದೀಗ ವಿಚಾರಣೆ ಆರಂಭಗೊಂಡಿದ್ದು ಸ್ಫೋಟಕ ಮಾಹಿತಿ ಹೊರಬರುತ್ತಿದೆ. ಈ ಉಗ್ರರು ಪಶ್ಚಿಮ ಬಂಗಳದ ಕೆಲ ಜಿಲ್ಲೆಗಳಲ್ಲಿ ತಂಗಿದ್ದರು. ಆದರೆ ಎಲ್ಲೂ ಕೂಡ ಎರಡು ದಿನಕ್ಕಿಂತ ಹೆಚ್ಚು ದಿನ ತಂಗಿಲ್ಲ. ಪ್ರತಿ ಬಾರಿ ಹಿಂದೂ ಹೆಸರಿನ ನಕಲಿ ಆಧಾರ್ ಕಾರ್ಡ್ ನೀಡಿ ಹೊಟೆಲ್ ರೂಂ ಪಡೆದುಕೊಂಡಿದ್ದ ಮಾಹಿತಿ ಬಯಲಾಗಿದೆ. ವಿದೇಶಿ ಮೂಲಗಳಿಂದ ಈ ಉಗ್ರರಿಗೆ ಹಣ ಸಂದಾಯವಾಗಿದೆ ಅನ್ನೋ ಮಾಹಿತಿಯನ್ನು ಎನ್ಐಎ ಹೇಳಿದೆ. 
 

Video Top Stories