ಅಯೋಧ್ಯೆ ರಾಮನಿಗಾಗಿ 1ಕೆಜಿ ಚಿನ್ನ ತಂದ ಅಮೆರಿಕದ ಭಕ್ತ ಉಮಾಶಂಕರ್ !
ಅಯೋಧ್ಯೆಗೆ ರಾಮನಿಗಾಗಿ 1 ಕೆಜಿ ಚಿನ್ನ ತಂದ ಅಮೆರಿಕದ ಭಕ್ತ ಉಮಾಶಂಕರ್ ದೀಕ್ಷಿತ್ ಅವರನ್ನ, ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಮಾತಾಡಿಸಿದ್ದು ಏನ್ ಹೇಳಿದ್ದಾರೆ ನೋಡೋಣ ಬನ್ನಿ..
ವಿದೇಶದಿಂದಲೂ ಅಯೋಧ್ಯೆಗೆ ಭಕ್ತರ ದಂಡು ಹರಿದು ಬರುತ್ತಿದೆ. ರಾಮನಿಗಾಗಿ ಕ್ಯಾಲಿಫೋರ್ನಿಯಾ(California) ಭಕ್ತರೊಬ್ಬರು ಚಿನ್ನ ಹೊತ್ತು ತಂದಿದ್ದಾರೆ. ರಾಮನಿಗೆ ಅಮೆರಿಕ(America) ಭಕ್ತರಿಂದ ಒಂದು ಕೆಜಿ ಚಿನ್ನ ಅರ್ಪಣೆ ಮಾಡಲಾಗಿದೆ. ಅಮೆರಿಕದ ಭಕ್ತ ಉಮಾಶಂಕರ್ ದೀಕ್ಷಿತ್(Umashankar Dixit) ಚಿನ್ನ ಅರ್ಪಿಸಿದ್ದಾರೆ. ಅಮೆರಿಕದಲ್ಲಿ ಅರ್ಚಕರ ವೃತ್ತಿಯಲ್ಲಿ ಉಮಾಶಂಕರ್ ಇದ್ದಾರೆ. ಕ್ಯಾಲಿಫೋರ್ನಿಯಾದ ಹಿಂದೂಗಳ ಪರವಾಗಿ 1 ಕೆಜಿ ಚಿನ್ನವನ್ನು ನೀಡಿದ್ದಾರೆ. ಪ್ರತೀ ಕುಟುಂಬದಿಂದ 1 ಗ್ರಾಂ. ಚಿನ್ನ ನೀಡುವಂತೆ ಕೇಳಿದ್ವಿ. 2 ವಾರದಲ್ಲೇ ಹಣ ಸಂಗ್ರಹಿಸಿ ಭಾರತದಲ್ಲಿ ಚಿನ್ನ(gold) ಖರೀದಿ ಮಾಡಲಾಗಿದೆ. ನಮ್ಮೆಲ್ಲರ ಆಸೆ ಚಿನ್ನದಲ್ಲಿ ಕಿರೀಟ ಮಾಡಿಸಬೇಕು ಅನ್ನೋದು ಆಗಿತ್ತು ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಅರ್ಚಕ ಉಮಾಶಂಕರ್ ದೀಕ್ಷಿತ್ ಹೇಳಿದ್ದಾರೆ. ಇವರು ಬೆಂಗಳೂರಿನವರಾಗಿದ್ದು, ಮೂರು ದಶಕದಿಂದ ಅಮೆರಿಕದಲ್ಲಿ ಇದ್ದಾರೆ.
ಇದನ್ನೂ ವೀಕ್ಷಿಸಿ: ಹೇಗಿದೆ ಗೊತ್ತಾ 51 ಇಂಚಿನ ಎತ್ತರದ ಬಾಲರಾಮ ವಿಗ್ರಹ? ಮೂರ್ತಿ ಪ್ರಭಾವಳಿ ಮೇಲೆ ಯಾವ್ಯಾವ ವಿಗ್ರಹ ಕೆತ್ತನೆ?