Asianet Suvarna News Asianet Suvarna News

ಆಪರೇಷನ್ ಬ್ಲಾಕ್ ಡಾಲರ್ ಸುಳಿಯಲ್ಲಿ ಕೇಜ್ರಿವಾಲ್? ಮತ್ತೆ ಜೈಲು ಸೇರ್ತಾರಾ ಸಿಎಂ?

ಎಎಪಿ ವಿರುದ್ಧ ಕಾನೂನು ನಿಯಮ ಉಲ್ಲಂಘಿಸಿ ವಿದೇಶದಿಂದ ದೇಣಿಗೆ  ಪಡೆದ ಆರೋಪ ಕೇಳಿ ಬಂದಿದೆ. ಈ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? ಆಪ್‌ಗೆ ಬಂದ ದೇಣಿಗೆ ಎಷ್ಟು?

ಅಬಕಾರಿ ಹಗರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತೊಂದು ವ್ಯೂಹದಲ್ಲಿ ಸಿಲುಕಿದ್ದಾರೆ. ಸ್ವಾತಿ ಮಲಿವಾಲ ಕೇಸ್ ಬಳಿಕ ಎಎಪಿ ಹೆಸರು ಬ್ಲಾಕ್ ಡಾಲರ್ ಹಗರಣದಲ್ಲಿ ಕೇಳಿ ಬಂದಿದೆ. ಒಂದೇ ಪಾಸ್‌ಪೋರ್ಟ್ ಮತ್ತು ಒಂದೇ ಮೇಲ್ ಐಟಿ ಬಳಸಿ ಎಎಪಿ  ಖಾತೆಗೆ ವಿದೇಶದಿಂದ ಕೋಟಿ  ಕೋಟಿ ಹಣ ಬಂದಿರುವ ಆರೋಪ ಕೇಳಿ ಬಂದಿದೆ.  2014 ರಿಂದ 2022ರವರೆಗೆ ಎಎಪಿಗೆ ಏಳು ಕೋಟಿಗೂ ಅಧಿಕ ಫಂಡಿಂಗ್ ಆಗಿದೆ ಎನ್ನಲಾಗಿದೆ. ಕೆನಡಾ, ಅಮೆರಿಕ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಿಂದ ದೇಣಿಗೆ ಪಡೆದ ಆರೋಪ ಕೇಳಿ ಬಂದಿದೆ. ಅಬಕಾರಿ ಹಗರಣ, ಸ್ವಾತಿ ಮಲಿವಾಲ ಹಲ್ಲೆ ಕೇಸ್ ಬಳಿಕ ಈಗ ಫಾರಿನ್ ಫಂಡ್ ಚಕ್ರವ್ಯೂಹದಲ್ಲಿಎಎಪಿ ಸಿಲುಕಿದೆ.