ಬೂದಿ ಮುಚ್ಚಿದ ಕೆಂಡದಂತಿರುವ ಮಣಿಪುರ: ಹಿಂಸಾಚಾರಕ್ಕೆ 50ಕ್ಕೂ ಹೆಚ್ಚು ಮಂದಿ ಬಲಿ
ಮಣಿಪುರದಲ್ಲಿ ಹಿಂಸಾಚಾರಕ್ಕೆ ತಿರುಗಿದ್ದ ಮೀಸಲಾತಿ ಹೋರಾಟ
ಕಫ್ರ್ಯೂನಿಂದ ನಿಧಾನವಾಗಿ ಹೊರಬರುತ್ತಿರುವ ಮಣಿಪುರದ ರಾಜಧಾನಿ
ಮೇಟಿ ಸಮುದಾಯಕ್ಜೆ ಎಸ್‌ಟಿ ಅಡಿ ಮೀಸಲಾತಿ ನೀಡಬೇಕೆಂದು ಆಗ್ರಹ
ಮಣಿಪುರ: ರಾಜ್ಯದಲ್ಲಿ ಹಿಂಸಾಚಾರಕ್ಕೆ ತಿರುಗಿದ್ದ ಮೀಸಲಾತಿ ಹೋರಾಟ ಸದ್ಯ ಸಹಜ ಸ್ಥಿತಿಗೆ ಮರಳಿದೆ. ಇಲ್ಲಿ ತನಕ ಹಿಂಸಾಚಾರಕ್ಕೆ 50ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.
ಮೇಟಿ ಸಮುದಾಯ ಎಸ್ಟಿ ಸ್ಥಾನಮಾನದ ಬೇಡಿಕೆಯ ಕುರಿತು 4 ವಾರಗಳಲ್ಲಿ ಕೇಂದ್ರಕ್ಕೆ ಶಿಫಾರಸನ್ನು ಕಳುಹಿಸುವಂತೆ ಮಣಿಪುರ ಹೈಕೋರ್ಟ್ ಕಳೆದ ತಿಂಗಳು ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ನಂತರ ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಬುಡಕಟ್ಟು ಜನಾಂಗದವರು ಮೆರವಣಿಗೆಯನ್ನು ಆಯೋಜಿಸಿದ್ದರು. ಈ ಮೆರವಣಿಗೆ ಬಳಿಕ ಹಿಂಸಾಚಾರಕ್ಕೆ ತಿರುಗಿತ್ತು. ಅಲ್ಲದೇ ಕೋರ್ಟ್‌ನ ಈ ಆದೇಶಕ್ಕೆ ಕುಕ್ಕಿ ಬುಡಕಟ್ಟು ಜನಾಂಗದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬುಡಕಟ್ಟು ಸಮುದಾಯಗಳ ವಿದ್ಯಾರ್ಥಿಗಳ ಒಕ್ಕೂಟ ಪ್ರತಿಭಟನೆಗೆ ಸಹ ಕರೆ ನೀಡಿತ್ತು. ಹತ್ತಾರು ವರ್ಷಗಳ ಮೀಸಲಾತಿ ಬೇಡಿಕೆ ಈಡೇರಿಸಲು ಮೇಟಿ ಸಮುದಾಯ ಆಗ್ರಹಿಸುತ್ತಿದೆ.
ಇದನ್ನೂ ವೀಕ್ಷಿಸಿ: ಚುನಾವಣೆ ಸೋಲಿನ ಬಳಿಕ ಮಂಡ್ಯದಿಂದಲೇ ದೂರವುಳಿದಿದ್ದ ರಮ್ಯಾ: ಈ ಬಾರಿ ಮತ ಹಾಕ್ತಾರಾ?